HomeEntertainmentರಿಲೀಸ್ ಆಯ್ತು 'ಶಾರ್ಟ್ ಕಟ್' ಕಿರುಚಿತ್ರ

ರಿಲೀಸ್ ಆಯ್ತು ‘ಶಾರ್ಟ್ ಕಟ್’ ಕಿರುಚಿತ್ರ

ತನ್ನ ಶೀರ್ಷಿಕೆಯಿಂದಲೇ ಸಾಕಷ್ಟು ಕುತೂಹಲ ಮೂಡಿಸಿದ್ದ, ”ಶಾರ್ಟ್ ಕಟ್” ಕಿರು ಚಿತ್ರವನ್ನು ಇಂದು ಆನಂದ್ ಆಡಿಯೋ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಶಾರ್ಟ್ ಫಿಲಂ ನೋಡುಗರ ಗಮನ ಸೆಳೆಯುವುದಲ್ಲದೆ ಭರ್ಜರಿ ವೀಕ್ಷಣೆ ಕಂಡಿದೆ.

ರಘು ಉಬರ್ ನಿರ್ದೇಶನದ ಈ ಕಿರುಚಿತ್ರದಲ್ಲಿ ದರ್ಶನ್ ರಾಯ್ ಸೇರಿದಂತೆ ಆರ್ ಜೆ ರಾಹುಲ್, ಶ್ರೀನಿವಾಸ್ ಶೆಟ್ಟಿ, ಸುಮಂತ್ ಗೋವರ್ಧನ್, ಅಶ್ವಿತಾ ಗೌಡ, ಸಂದೀಪ್ ದೇವಾಡಿಗ, ಅಶ್ವಿನಿ ಆರಾಧ್ಯ, ವಿನೀತ್ ಕುಮಾರ್, ಮುರಳೀಧರ್, ಯಶೋಧ, ನಿಸರ್ಗ ಗೌಡ ಲಾಲಿ, ವಿನಿತ್ ರಾಜ್, ನಾಗ ಲಕ್ಷ್ಮಿ, ಪರ್ಫುಲ್, ಪ್ರಜ್ವಲ್ ನಾಗರಾಜ್ , ಗಣೇಶ್ ದೇವಾಡಿಗ, ಹಾಗೂ ದೀಪಕ್  ಅಭಿನಯಿಸಿದ್ದಾರೆ. ನಟ ದರ್ಶನ್ ರಾಯ್ ಅವರೇ ಶಕ್ತಿ ಫಿಲಂಸ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಿದ್ದು, ರಘು ಉಬರ್ ಸಂಕಲನ, ಸಂದೀಪ್ ದೇವಾಡಿಗ ಛಾಯಾಗ್ರಹಣ, ಹಾಗೂ ಸ್ವರೂಪ್ ಗೌಡ ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular