HomeKarnatakaBREAKING : ಸಿಎಂ ಕಾನೂನು ಸಲಹೆಗಾರ 'ಎ.ಎಸ್.ಪೊನ್ನಣ್ಣ' ನಿವಾಸದ ಬಳಿ ಹುಲಿ ಓಡಾಟ, ಆತಂಕ ಸೃಷ್ಟಿ.!

BREAKING : ಸಿಎಂ ಕಾನೂನು ಸಲಹೆಗಾರ ‘ಎ.ಎಸ್.ಪೊನ್ನಣ್ಣ’ ನಿವಾಸದ ಬಳಿ ಹುಲಿ ಓಡಾಟ, ಆತಂಕ ಸೃಷ್ಟಿ.!

ಕೊಡಗು: ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ಹಾಗೂ ಮಾನವ ಸಂಘರ್ಷ ಹೆಚ್ಚುತ್ತಿದೆ. ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ನಿವಾಸದ ಬಳಿ ಹುಲಿ ಪ್ರತ್ಯಕ್ಷವಾಗಿರುವ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಪೊನ್ನಂಪೇಟೆಯಲ್ಲಿರುವ ಎ.ಎಸ್.ಪೊನ್ನಣ್ಣ ಅವರ ಮನೆಯ ಬಳಿ ಹುಲಿ ಓಡಾಟ ನಡೆಸಿದ್ದು, ಹುಲಿಯ ಹೆಜ್ಜೆ ಗುರುತುಗಳು ಸ್ಥಳದಲ್ಲಿ ಮೂಡಿವೆ. ಈ ಹಿನ್ನೆಲೆಯಲ್ಲಿ ನಿವಾಸಿಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಘಟನಾ ಸ್ಥಳಕ್ಕೆ ಆಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಹುಲಿ ಸೆರೆಗಾಗಿ ಕಾರ್ಯಾಚರಣೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular