ʼಆರ್ಥಿಕ ಸಮಸ್ಯೆʼಗೆ ಪರಿಹಾರ ಕೊಡುತ್ತೆ ನೀರು ತುಂಬಿದ ಹೂಜಿ

ಆರ್ಥಿಕ ಸಮಸ್ಯೆ ಎಲ್ಲರನ್ನು ಕಾಡುತ್ತದೆ. ನಮ್ಮ ಸುತ್ತಮುತ್ತಲಿರುವ ಕೆಲ ವಸ್ತುಗಳು ಆರ್ಥಿಕ ವೃದ್ಧಿಗೆ ತಡೆಯಾಗಿರುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಆರ್ಥಿಕ ವೃದ್ಧಿಗೆ ನೆರವಾಗುವಂತಹ ಕೆಲವೊಂದು ಉಪಾಯಗಳನ್ನು ನಾವು ಅನುಸರಿಸಿದ್ರೆ ಹಣದ ಸಮಸ್ಯೆ ಎದುರಾಗುವುದಿಲ್ಲ.

ಮನೆಯ ಉತ್ತರ ದಿಕ್ಕಿಗೆ ನೀರು ತುಂಬಿದ ಹೂಜಿಯನ್ನಿಡಿ. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ. ಹೂಜಿ ಇಲ್ಲವಾದಲ್ಲಿ ಮಣ್ಣಿನಿಂದ ಮಾಡಿದ ಸಣ್ಣ ಮಡಿಕೆಯಲ್ಲಿ ನೀರಿಡಿ. ಅದು ಎಂದೂ ಖಾಲಿಯಾಗದಂತೆ ನೋಡಿಕೊಳ್ಳಿ.

ಪಂಚಮುಖಿ ಆಂಜನೇಯ ಮೂರ್ತಿಯನ್ನು ಅಥವಾ ಫೋಟೋವನ್ನು ಮನೆಯ ನೈಋತ್ಯ ದಿಕ್ಕಿನಲ್ಲಿಡಿ. ನಿಯಮಿತ ರೂಪದಲ್ಲಿ ಪೂಜೆ ಮಾಡಿ.

ಹೆಚ್ಚು ಸಮಯ ಕಳೆಯುವ ಮನೆಯ ಒಂದು ಸ್ಥಳದಲ್ಲಿ ಬೆಳ್ಳಿ ಅಥವಾ ಹಿತ್ತಾಳೆಯ ಪಿರಾಮಿಡ್ ಇಡಿ. ಇದರಿಂದ ಆದಾಯ ಹೆಚ್ಚಾಗುವ ಜೊತೆಗೆ ಎಂದೂ ಆರ್ಥಿಕ ಸಮಸ್ಯೆ ಎದುರಾಗುವುದಿಲ್ಲ.

ಮನೆಯ ಮುಖ್ಯ ದ್ವಾರದ ಬಳಿ ಲಕ್ಷ್ಮಿ ಹಾಗೂ ಕುಬೇರನ ಫೋಟೋವನ್ನು ಹಾಕಿ.

ಲೋಹದಿಂದ ಮಾಡಿದ ಆಮೆ ಅಥವಾ ಮೀನನ್ನು ಮನೆಯಲ್ಲಿಡುವುದು ಬಹಳ ಶುಭ. ಮನೆಯಲ್ಲಿರುವ ಸಮಸ್ಯೆಗೆ ಪರಿಹಾರ ಸಿಕ್ಕಿ, ಆರ್ಥಿಕ ವೃದ್ಧಿಯಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read