ಬೆಂಗಳೂರು : ಭಿಕ್ಷುಕನ ಸೋಗಿನಲ್ಲಿ ದರೋಡೆ ಮಾಡುತ್ತಿದ್ದ, ಕರ್ನಾಟಕದ ಪೊಲೀಸರಿಗೆ ಬೇಕಾಗಿದ್ದ ಆಂಧ್ರ ಮೂಲದ ಕುಖ್ಯಾತ ಕಳ್ಳನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ . ಬಂಧಿತನನ್ನು ಗುಜ್ಜಲ ರಾಮಕೃಷ್ಣ ಎಂದು ಗುರುತಿಸಲಾಗಿದೆ.
ಈತನ ಮೇಲೆ ಹಾವೇರಿ, ಗಂಗಾವತಿ, ಶಿರಾ ಸೇರಿ 6 ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 6 ಪೊಲೀಸ್ ಠಾಣೆಗಳಿಗೆ ಬೇಕಾಗಿದ್ದ ಖದೀಮ ಇದೀಗ ಸೆರೆ ಸಿಕ್ಕಿದ್ದಾನೆ. ಭಿಕ್ಷುಕನಂತೆ ನಟಿಸುತ್ತಾ ದರೋಡೆ ಮಾಡುತ್ತಿದ್ದನು.
ರಾಯಚೂರಿನ ಪಶ್ಚಿಮ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಭಿಕ್ಷುಕರಂತೆ ಓಡಾಡಿಕೊಂಡು ಮನೆ ಗುರುತು ಮಾಡಿಕೊಂಡು ರಾತ್ರಿ ಕಳ್ಳತನ ಮಾಡುತ್ತಿದ್ದನು. ದಿನಕ್ಕೆ ಒಂದು ಮನೆ ಕಳ್ಳತನ ಮಾಡಿ ಖಾಸಗಿ ಬ್ಯಾಂಕ್ ನಲ್ಲಿ ಇಡುತ್ತಿದ್ದನು. ಬ್ಯಾಂಕ್ ಗಳಲ್ಲಿ ಚಿನ್ನ ಅಡವಿಟ್ಟು ಹಣ ಪಡೆಯುತ್ತಿದ್ದನು.ಬಂಧಿತನಿಂದ ಚಿನ್ನಾಭರಣ ವಶಕ್ಕೆ ಪಡೆದುಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
