
ಆರೋಪಿಗಳಾದ ಅಕ್ಷಯ್ (32) ಮತ್ತು ಶಬಾಶ್ (26) ವಿರುದ್ಧ ಪೋಕ್ಸೊ ಕಾಯ್ದೆ ಮತ್ತು ದೌರ್ಜನ್ಯ ಪ್ರಕರಣದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.ಆರೋಪಿಗಳಲ್ಲಿ ಒಬ್ಬರು ಸಂತ್ರಸ್ತೆಯ ಸ್ನೇಹಿತ ಎಂದು ಹೇಳಲಾಗಿದ್ದು, ಅವರು ತಮ್ಮೊಂದಿಗೆ ಪ್ರವಾಸಕ್ಕೆ ಹೋಗಲು ಹುಡುಗಿಯನ್ನು ಮನವೊಲಿಸಿ ಕರೆದುಕೊಂಡು ಹೋಗಿದ್ದರು. ಪ್ರವಾಸದ ವೇಳೆ ಆರೋಪಿಯು ಬಾಲಕಿಗೆ ನಿದ್ರೆ ಮಾತ್ರಗಳನ್ನು ಬೆರೆಸಿ ನಂತರ ಇಬ್ಬರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಹೇಳಲಾಗಿದೆ.
ಈ ಘಟನೆ ಆಗಸ್ಟ್ 19 ರಂದು ನಡೆದಿದ್ದು, ಸೋಮವಾರ ಪ್ರಕರಣ ದಾಖಲಿಸಲಾಗಿದೆ. ಸಾಗರ ಪೊಲೀಸರು ಎಫ್ಐಆರ್ ದಾಖಲಿಸಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

