ಬೆಂಗಳೂರು : ಬೆಂಗಳೂರಿನ ಆನೇಕಲ್ ಸಮೀಪದ ರೈಲ್ವೆ ಗೇಟ್ ಬಳಿ ಬಿಎಂಟಿಸಿ ಬಸ್ಸೊಂದು ರೈಲು ಹಳಿಯ ಮೇಲೆಯೇ ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದ್ದು, ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರಿ ರೈಲು ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಆನೇಕಲ್‌ನಿಂದ ಅತ್ತಿಬೆಲೆ ಕಡೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಬಿಎಂಟಿಸಿ ಬಸ್, ರೈಲು ಹಳಿ ದಾಟುವಾಗ ತಾಂತ್ರಿಕ ದೋಷದಿಂದ ಹಳಿಯ ಮೇಲೆಯೇ ಸ್ಥಗಿತಗೊಂಡಿದೆ. ಅದೃಷವಶಾತ್ ರೈಲ್ವೇ ಪಾಸಿಂಗ್ ಇಲ್ಲದಿದ್ದರಿಂದ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ.
ಟ್ರಾಫಿಕ್ ಜಾಮ್: ಈ ಘಟನೆಯಿಂದಾಗಿ ಆನೇಕಲ್-ಅತ್ತಿಬೆಲೆ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಪರದಾಡುವಂತಾಯಿತು.
ಸಾರ್ವಜನಿಕರ ಆಕ್ರೋಶ: ಬಿಎಂಟಿಸಿ ಬಸ್‌ಗಳ ಕಳಪೆ ನಿರ್ವಹಣೆಯ ಬಗ್ಗೆ ಸಾರ್ವಜನಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಳೆಯ ಬಸ್‌ಗಳನ್ನು ರಸ್ತೆಗೆ ಇಳಿಸುತ್ತಿರುವುದರಿಂದ ಇಂತಹ ಜೀವಕ್ಕೆ ಅಪಾಯ ತರುವ ಘಟನೆಗಳು ಮರುಕಳಿಸುತ್ತಿವೆ ಎಂದು ಜನರು ದೂರಿದ್ದಾರೆ. ಅದೃಷ್ಟವಶಾತ್ ಚಾಲಕ ಮತ್ತು ನಿರ್ವಾಹಕ ಹಾಗೂ ಪ್ರಯಾಣಿಕರು ಸಮಯಪ್ರಜ್ಞೆ ಮೆರೆದಿದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

