ಮಹಾಕಾವ್ಯ ಆಧಾರಿತ ಬಹುನಿರೀಕ್ಷಿತ ‘ರಾಮಾಯಣ ಭಾಗ 1’ ಸಿನಿಮಾದ ಹೊಸ ಟ್ರೇಲರ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಈ ಚಿತ್ರದ ಹಿಂದಿ ಟ್ರೇಲರ್ ವೀಕ್ಷಿಸಿದ ಸಿನಿಪ್ರಿಯರಿಗೆ, ಇದೀಗ ಅನಾವರಣಗೊಂಡಿರುವ ಇಂಗ್ಲಿಷ್ ಆವೃತ್ತಿಯು ಮತ್ತಷ್ಟು ಸರ್ಪ್ರೈಸ್ ನೀಡಿದೆ. ಪ್ರಮುಖವಾಗಿ ಇಂಗ್ಲಿಷ್ ಆವೃತ್ತಿಯ ಅತ್ಯುತ್ತಮ ಲಿಪ್ ಸಿಂಕ್ ಹಾಗೂ ನೈಜ ನಿರೂಪಣೆ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇಂಟರ್ನೆಟ್ನಲ್ಲಿ ಈ ಹೊಸ ಝಲಕ್ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿದ್ದು, ಮೂಲ ಹಿಂದಿ ಆವೃತ್ತಿಗಿಂತ ಇಂಗ್ಲಿಷ್ ಅವತರಣಿಕೆಯೇ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ನೆಟ್ಟಿಗರು ಅಭಿಪ್ರಾಯಪಡುತ್ತಿದ್ದಾರೆ. ಪ್ರಭಾಸ್, ರಣಬೀರ್ ಕಪೂರ್ ರಾಮನಾಗಿ, ಯಶ್ ರಾವಣನಾಗಿ ಹಾಗೂ ಸಾಯಿ ಪಲ್ಲವಿ ಸೀತೆಯಾಗಿ ಕಾಣಿಸಿಕೊಂಡಿರುವ ಈ ದೃಶ್ಯಕಾವ್ಯವು ಭಾರತೀಯ ಸಿನಿಮಾಗಳ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಚಿತ್ರದಲ್ಲಿ ಬಳಸಿರುವ ಭಾರತೀಯ ಶೈಲಿಯ ಇಂಗ್ಲಿಷ್ ಉಚ್ಚಾರಣೆಯು ಕಥೆಯ ನೈಜತೆಗೆ ಹತ್ತಿರವಾಗಿದೆ ಎಂದು ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದೇಶಿ ಸಿನಿಮಾಗಳನ್ನು ಭಾರತಕ್ಕೆ ತರುವಾಗ ಅಲ್ಲಿನ ಉಚ್ಚಾರಣೆಗಳನ್ನು ಬಳಸುವಂತೆಯೇ, ಭಾರತೀಯ ಕಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಾಗ ನಮ್ಮದೇ ಆದ ಸ್ಪಷ್ಟ ಉಚ್ಚಾರಣೆ ಇರುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹಿಂದಿ ಮತ್ತು ಇಂಗ್ಲಿಷ್ ಟ್ರೇಲರ್ಗಳ ನಡುವೆ ಕೆಲವು ಕುತೂಹಲಕಾರಿ ವ್ಯತ್ಯಾಸಗಳಿವೆ. ಹಿಂದಿ ಟ್ರೇಲರ್ 4 ನಿಮಿಷ 10 ಸೆಕೆಂಡುಗಳಷ್ಟು ಉದ್ದವಿದ್ದರೆ, ಇಂಗ್ಲಿಷ್ ಆವೃತ್ತಿಯನ್ನು 3 ನಿಮಿಷ 55 ಸೆಕೆಂಡುಗಳಿಗೆ ಸಂಪಾದಿಸಲಾಗಿದೆ. ಹಿಂದಿಯಲ್ಲಿದ್ದ ಕೆಲವು ದೃಶ್ಯಗಳನ್ನು ಇಂಗ್ಲಿಷ್ ಟ್ರೇಲರ್ನಲ್ಲಿ ಕಟ್ ಮಾಡಲಾಗಿದ್ದು, ಕಥೆಯ ವೇಗಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ಈ ಹೊಸ ವೀಡಿಯೊದೊಂದಿಗೆ ಚಿತ್ರತಂಡ ಸಿನಿಮಾದ ಅಧಿಕೃತ ಬಿಡುಗಡೆ ದಿನಾಂಕವನ್ನು ಸಹ ಬಹಿರಂಗಪಡಿಸಿದೆ. ಆರಂಭದಲ್ಲಿ ದೀಪಾವಳಿ ಹಬ್ಬಕ್ಕೆ ಸಿನಿಮಾ ಬರಲಿದೆ ಎಂದು ಹೇಳಲಾಗಿದ್ದರೂ, ದಿನಾಂಕ ಸ್ಪಷ್ಟವಾಗಿರಲಿಲ್ಲ. ಇದೀಗ ಸಿಕ್ಕಿರುವ ಮಾಹಿತಿಯಂತೆ ನವೆಂಬರ್ 6 ರಂದು ಈ ಸಿನಿಮಾ ವಿಶ್ವದಾದ್ಯಂತ ಅದ್ದೂರಿಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣಲಿದೆ.
An epic journey unlike anything seen before.
Watch the official trailer for #Ramayana, coming to theatres worldwide November 6. pic.twitter.com/BSiwVJMSs9
— Sony Pictures (@SonyPictures) August 5, 2026

