
ಬಹಿರ್ದೆಸೆಗೆ ತೆರಳಿದ್ದಾಗ ಯುವಕ ನಾಗೇಶ್ ಮೇಲೆ ಕಾಡಾನೆ ದಾಳಿ ನಡೆಸಿದೆ.ಆನೆ ಸೊಂಡಲಿನಿಂದ ಎತ್ತಿ ಎಸೆದಿದ್ದು, ರಾತ್ರಿಯಿಡೀ ಯುವಕ ಕಾಡಿನಲ್ಲೇ ನರಳಾಡಿದ್ದಾನೆ.
ಬೆಳಗ್ಗೆ ಯುವಕನ್ನು ಗಮನಿಸಿದ ಸ್ಥಳೀಯರು ಗುಂಡ್ಲುಪೇಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆನೆ ದಾಳಿ ಪರಿಣಾಮ ಯುವಕನ ಬಲಗಾಲು ಸ್ವಾಧೀನ ತಪ್ಪಿರುವುದು ಗೊತ್ತಾಗಿದೆ .ಸದ್ಯ, ಯುವಕನಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಘಟನೆ ಹಿನ್ನೆಲೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಆನೆಯನ್ನು ಸೆರೆ ಹಿಡಿಯುವಂತೆ ಆಗ್ರಹಿಸಿದ್ದಾರೆ.

