HomeIndiaBIG NEWS : ಲಾಡ್ಜ್ ನಲ್ಲಿ ಕೇರಳ ಮೂಲದ ದಂಪತಿ, ಸ್ನೇಹಿತೆ ಶವವಾಗಿ ಪತ್ತೆ...

BIG NEWS : ಲಾಡ್ಜ್ ನಲ್ಲಿ ಕೇರಳ ಮೂಲದ ದಂಪತಿ, ಸ್ನೇಹಿತೆ ಶವವಾಗಿ ಪತ್ತೆ ; ಆತ್ಮಹತ್ಯೆ ಶಂಕೆ..!

ಅರುಣಾಚಲ ಪ್ರದೇಶದ ಜಿರೋ ಪಟ್ಟಣದ ಹೋಟೆಲ್ ಕೋಣೆಯಲ್ಲಿ ಕೇರಳದ ವಿವಾಹಿತ ದಂಪತಿ ಮತ್ತು ಅವರ ಸ್ನೇಹಿತೆ ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ.

ಅರುಣಾಚಲ ಪ್ರದೇಶದ ಜಿರೋ ಪಟ್ಟಣದ ಹೋಟೆಲ್ ಕೋಣೆಯಲ್ಲಿ ವಿವಾಹಿತ ದಂಪತಿ ಮತ್ತು ಅವರ ಸ್ನೇಹಿತ ಸೇರಿದಂತೆ ಕೇರಳದ ಮೂವರು ವ್ಯಕ್ತಿಗಳು ಮಂಗಳವಾರ ಶವವಾಗಿ ಪತ್ತೆಯಾಗಿದ್ದಾರೆ. ಮೇಲ್ನೋಟಕ್ಕೆ ಮೂವರ ಮಣಿಕಟ್ಟಿನ ಗಾಯಗಳಿಂದ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಕೊಟ್ಟಾಯಂ ಜಿಲ್ಲೆಯ ಆಯುರ್ವೇದ ವೈದ್ಯರಾದ ನವೀನ್ ಥಾಮಸ್, ಅವರ ಪತ್ನಿ ದೇವಿ ಬಿ ಎಂದು ಗುರುತಿಸಲಾಗಿದೆ. ಮೂರನೇ ವ್ಯಕ್ತಿಯನ್ನು ಶಾಲಾ ಶಿಕ್ಷಕಿ ಮತ್ತು ತಿರುವನಂತಪುರಂ ನಿವಾಸಿ ಆರ್ಯ ಬಿ ನಾಯರ್ (29) ಎಂದು ಗುರುತಿಸಲಾಗಿದೆ.

ಈ ಮೂವರು ಮಾರ್ಚ್ 28 ರಂದು ಹೋಟೆಲ್ ಗೆ ಚೆಕ್ ಇನ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ, ಏಪ್ರಿಲ್ 1 ರವರೆಗೆ ಅವರು ಎಲ್ಲಿಯೂ ಕಾಣಿಸಲಿಲ್ಲ ಎಂದು ಹೋಟೆಲ್ ಸಿಬ್ಬಂದಿ ಹೇಳಿದ್ದಾರೆ, ಅನುಮಾನಾಸ್ಪವಾಗಿ ಒಂದೇ ಕೋಣೆಯಲ್ಲಿ ಕೇರಳದ ವಿವಾಹಿತ ದಂಪತಿ ಮತ್ತು ಅವರ ಸ್ನೇಹಿತ ಮಂಗಳವಾರ ಶವವಾಗಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular