HomeIndiaBREAKING : ಉತ್ತರಾಖಂಡದ ಗರ್ಜಿಯಾ ದೇವಿ ಸನ್ನಿಧಿಯಲ್ಲಿ ಭಾರಿ ಅಗ್ನಿ ಅವಘಡ, ಹಲವು ಅಂಗಡಿಗಳು ಸುಟ್ಟು...

BREAKING : ಉತ್ತರಾಖಂಡದ ಗರ್ಜಿಯಾ ದೇವಿ ಸನ್ನಿಧಿಯಲ್ಲಿ ಭಾರಿ ಅಗ್ನಿ ಅವಘಡ, ಹಲವು ಅಂಗಡಿಗಳು ಸುಟ್ಟು ಭಸ್ಮ |Video

ಗರ್ಜಿಯಾ: ಉತ್ತರಾಖಂಡದ ರಾಮ್ನಗರ್ ಬಳಿಯ ಗರ್ಜಿಯಾ ಗ್ರಾಮದ ಗರ್ಜಿಯಾ ದೇವಿ ದೇವಾಲಯದ ಸುತ್ತಲೂ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ಕೆನ್ನಾಲಿಗೆಗೆ ಹಲವಾರು ಅಂಗಡಿಗಳು ಸುಟ್ಟುಭಸ್ಮವಾಗಿದೆ.

ಬೆಂಕಿ ವೇಗವಾಗಿ ಹರಡುತ್ತಿದ್ದಂತೆ ಭಕ್ತರಲ್ಲಿ ಭೀತಿ ಆವರಿಸಿತು, ಹೊಗೆ ಆಕಾಶದೆತ್ತರಕ್ಕೆ ಚಿಮ್ಮಿತು. ಅಗ್ನಿ ಅವಘಡದ ವಿಡಿಯೋ ವೈರಲ್ ಆಗಿದೆ. ಮಾಹಿತಿ ತಿಳಿದ ಕೂಡಲೇ ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದೆ.

ಗರ್ಜಿಯಾ ದೇವಿ ದೇವಾಲಯವು ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹೊರವಲಯದಲ್ಲಿರುವ ಉತ್ತರಾಖಂಡದ ರಾಮ್ನಗರ್ ಬಳಿಯ ಗರ್ಜಿಯಾ ಗ್ರಾಮದಲ್ಲಿರುವ ಹಿಂದೂ ದೇವಿ ದೇವಾಲಯವಾಗಿದೆ. ಇದು ಪವಿತ್ರ ಶಕ್ತಿ ದೇವಾಲಯವಾಗಿದ್ದು, ಗರ್ಜಿಯಾ ದೇವಿ ಪ್ರಧಾನ ದೇವತೆಯಾಗಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular