BIG NEWS: ಭೂಮಿಯತ್ತ ಬರುತ್ತಿದೆ ಮತ್ತೊಂದು ಕ್ಷುದ್ರಗ್ರಹ !

ಭೂಮಿಯ ಕಡೆಗೆ ಬೃಹತ್ ಕ್ಷುದ್ರಗ್ರಹವೊಂದು ಅತಿ ವೇಗದಲ್ಲಿ ನುಗ್ಗುತ್ತಿದೆ. 2014 TN17 ಎಂದು ಹೆಸರಿಸಲಾಗಿರುವ ಈ ಕ್ಷುದ್ರಗ್ರಹವು ತಾಜ್‌ಮಹಲ್‌ನಷ್ಟು ದೊಡ್ಡದಾಗಿದೆ ಮತ್ತು ಗಂಟೆಗೆ 77,282 ಕಿ.ಮೀ ವೇಗದಲ್ಲಿ ಚಲಿಸುತ್ತಿದೆ. ಇದು ಮಾರ್ಚ್ 26 ರಂದು ಸಂಜೆ 5:04ಕ್ಕೆ ಭೂಮಿಗೆ ಅತಿ ಸಮೀಪಕ್ಕೆ ಬರಲಿದೆ.

ಈ ಕ್ಷುದ್ರಗ್ರಹವು ಭೂಮಿ ಮತ್ತು ಚಂದ್ರನ ನಡುವಿನ ಅಂತರಕ್ಕಿಂತ 13 ಪಟ್ಟು ದೂರದಲ್ಲಿ, ಅಂದರೆ 5 ಮಿಲಿಯನ್ ಕಿ.ಮೀ ದೂರದಲ್ಲಿ ಹಾದುಹೋಗಲಿದೆ. ಆದರೆ, ಇದರ ಗಾತ್ರ ಮತ್ತು ವೇಗದಿಂದಾಗಿ ವಿಜ್ಞಾನಿಗಳು ಇದನ್ನು ಅಪಾಯಕಾರಿ ಎಂದು ವರ್ಗೀಕರಿಸಿದ್ದಾರೆ.

ಅಪೊಲೊ ಗುಂಪಿಗೆ ಸೇರಿದ ಈ ಕ್ಷುದ್ರಗ್ರಹವು ಭೂಮಿಯ ಪಥವನ್ನು ದಾಟಿ ಸಾಗುವ ಕಕ್ಷೆಯನ್ನು ಹೊಂದಿದೆ. ಹೀಗಾಗಿ, ಭವಿಷ್ಯದಲ್ಲಿ ಇದರ ಪಥದಲ್ಲಿ ಸಣ್ಣ ಬದಲಾವಣೆಯಾದರೂ ಅದು ಭೂಮಿಗೆ ಅಪಾಯ ತರಬಹುದು. ಗುರುತ್ವಾಕರ್ಷಣೆಯ ಬಲ ಅಥವಾ ಬಾಹ್ಯಾಕಾಶ ಅವಶೇಷಗಳ ಡಿಕ್ಕಿಯಿಂದ ಇದರ ಪಥ ಬದಲಾಗುವ ಸಾಧ್ಯತೆ ಇದೆ.

ಈ ಕ್ಷುದ್ರಗ್ರಹವು ಭೂಮಿಗೆ ಡಿಕ್ಕಿ ಹೊಡೆದರೆ ಭಾರಿ ವಿನಾಶ ಸಂಭವಿಸಬಹುದು. ನೂರಾರು ಪರಮಾಣು ಬಾಂಬ್‌ಗಳ ಸ್ಫೋಟದಷ್ಟು ಶಕ್ತಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಭೂಮಿಯ ಅನೇಕ ಪ್ರದೇಶಗಳು ನಾಶವಾಗಬಹುದು, ಭಾರಿ ಬೆಂಕಿ ಕಾಣಿಸಿಕೊಳ್ಳಬಹುದು ಮತ್ತು ವರ್ಷಗಳವರೆಗೆ ಹವಾಮಾನದಲ್ಲಿ ಬದಲಾವಣೆ ಉಂಟಾಗಬಹುದು.

ಈ ಕ್ಷುದ್ರಗ್ರಹವನ್ನು ನಾಸಾದ ಸೆಂಟರ್ ಫಾರ್ ನಿಯರ್-ಅರ್ಥ್ ಆಬ್ಜೆಕ್ಟ್ ಸ್ಟಡೀಸ್ (CNEOS) ಮತ್ತು ಇತರ ಸಂಸ್ಥೆಗಳು ನಿರಂತರವಾಗಿ ಗಮನಿಸುತ್ತಿವೆ. ದೂರದರ್ಶಕಗಳು, ರಾಡಾರ್ ಮತ್ತು ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಹಾಯದಿಂದ ಇದರ ಚಲನವಲನಗಳನ್ನು ಟ್ರ್ಯಾಕ್ ಮಾಡಲಾಗುತ್ತಿದೆ.

ಭೂಮಿಯ ಸುರಕ್ಷತೆಗಾಗಿ ಇಂತಹ ಕ್ಷುದ್ರಗ್ರಹಗಳ ಬಗ್ಗೆ ನಿಗಾ ವಹಿಸುವುದು ಮತ್ತು ಅಧ್ಯಯನ ಮಾಡುವುದು ಅತ್ಯಗತ್ಯವಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read