HomeInternationalSHOCKING : ಪಂದ್ಯದ ವೇಳೆ ಸಿಡಿಲು ಬಡಿದು ಫುಟ್’ಬಾಲ್ ಆಟಗಾರ ಸಾವು : ಭಯಾನಕ ವೀಡಿಯೊ...

SHOCKING : ಪಂದ್ಯದ ವೇಳೆ ಸಿಡಿಲು ಬಡಿದು ಫುಟ್’ಬಾಲ್ ಆಟಗಾರ ಸಾವು : ಭಯಾನಕ ವೀಡಿಯೊ ವೈರಲ್.!

ಸಾವು ಯಾವಾಗ ಮತ್ತು ಎಲ್ಲಿಂದ ಬರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಿಲ್ಲ. ಇಂತಹ ಘಟನೆ ಪೆರುವಿನಲ್ಲಿ ನಡೆದಿದೆ.ಕ್ರೀಡಾಂಗಣದ ಸುತ್ತಮುತ್ತಲಿನ ಜನರು ತಮ್ಮ ತಂಡ ಗೆಲ್ಲಬೇಕೆಂದು ಕೂಗುತ್ತಿದ್ದಾರೆ. ಆದರೆ ಅಷ್ಟರಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆಯಿತು.

ಫುಟ್ಬಾಲ್ ಪಂದ್ಯದ ವೇಳೆ ಮೈದಾನದಲ್ಲಿ ಸಿಡಿಲು ಬಡಿದಿದೆ. ಪರಿಣಾಮ ಓರ್ವ ಆಟಗಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಇತರ ಐವರು ಆಟಗಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಘಾತಕಾರಿ ಘಟನೆಯ ಭಯಾನಕ ವೀಡಿಯೊ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಪಂದ್ಯ ನಡೆಯುತ್ತಿರುವಾಗ. ಜೋಸ್ ಹುಗಾ ಡಿ ಲಾ ಕ್ರೂಜ್ ಮೆಜಾ (39) ಎಂಬ ಯುವಕನೊಬ್ಬ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಆಟಗಾರರು ಮೈದಾನದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಸಿಡಿಲು ಬಡಿದಿದೆ. ಆ ಸಮಯದಲ್ಲಿ ಜೋಸ್ ಹೂಗಾ ಅವರ ಪಕ್ಕದಲ್ಲಿ ನಡೆಯುತ್ತಿದ್ದ 40 ವರ್ಷದ ಗೋಲ್ ಕೀಪರ್ ಜುವಾನ್ ಚೊಕ್ಕೊ ಲಕ್ಟಾ ಕೂಡ ಇದ್ದರು. ಸಿಡಿಲು ಬಡಿದು ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ವೀಡಿಯೊದಲ್ಲಿ, ಸಿಡಿಲು ಬಡಿದ ಸ್ವಲ್ಪ ಸಮಯದ ನಂತರ ಹತ್ತಿರದ ಎಂಟು ಆಟಗಾರರು ನೆಲಕ್ಕೆ ಬೀಳುವುದನ್ನು ಕಾಣಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular