HomeKarnatakaBREAKING : ವಸತಿ ಶಾಲಾ ಶಿಕ್ಷಕನ ಕುಟುಂಬದ ಕಿರುಕುಳಕ್ಕೆ ಹಾವೇರಿಯಲ್ಲಿ ವಿದ್ಯಾರ್ಥಿನಿ ಬಲಿ..!

BREAKING : ವಸತಿ ಶಾಲಾ ಶಿಕ್ಷಕನ ಕುಟುಂಬದ ಕಿರುಕುಳಕ್ಕೆ ಹಾವೇರಿಯಲ್ಲಿ ವಿದ್ಯಾರ್ಥಿನಿ ಬಲಿ..!

ಹಾವೇರಿ : ವಸತಿ ಶಾಲಾ ಶಿಕ್ಷಕನ ಪತ್ನಿಯ ಕಿರುಕುಳಕ್ಕೆ ವಿದ್ಯಾರ್ಥಿನಿ ಬಲಿಯಾದ ಘಟನೆ ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ.

ಅರ್ಚನಾ ಗೌಡಣ್ಣನವರ (18) ಎಂಬ ಬಾಲಕಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬಯಲಿಗೆ ಬಂದಿದೆ.

ಮೊರಾರ್ಜಿ ವಸತಿ ಶಾಲಾ ಶಿಕ್ಷಕನ ಕುಟುಂಬ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಮೃತ ಬಾಲಕಿ ಅರ್ಚನಾ ಹಾಗೂ ಶಾಲೆಯ ಹಿಂದಿ ಶಿಕ್ಷಕ ಆರಿತವುಲ್ಲಾ ಮಗಳು ಝೋಯಾ ಒಬ್ಬರು ಕ್ಲಾಸ್ ಮೇಟ್ ಆಗಿದ್ದರು. ಓದಿನಲ್ಲಿ ಅರ್ಚನಾ ಝೋಯಾಗಿಂದ ಮುಂದೆ ಇದ್ದಳು. ಈ ಕಾರಣಕ್ಕೆ ಝೋಯಾ ತಾಯಿ ಅರ್ಚನಾಗೆ ಕಿರುಕುಳ ನೀಡಿದ್ದರಂತೆ. ಹಾಗೂ ಕೆಲವು ವೈಯಕ್ತಿಕ ಕಾರಣಗಳನ್ನಿಟ್ಟುಕೊಂಡು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular