ವಿಜಯಪುರ : ವಿಜಯಪುರದಲ್ಲಿ ಚಾಕು ಇರಿದು ಮಹಿಳಾ ಅಧಿಕಾರಿಯ ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿ ಮೇಲೆ ದುಷ್ಕರ್ಮಿ ದಾಳಿ ನಡೆಸಿದ ಘಟನೆ ಇಂಡಿ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ ನಡೆದಿದೆ.
ರೇಣುಕಾ ಸಾಯಬಣ್ಣ ಕನ್ನೊಳ್ಳಿ (30) ಎಂಬ ಮಹಿಳಾ ಅಧಿಕಾರಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಲಾಗಿದೆ. ರೇಣುಕಾ ಅವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಹತ್ಯೆಗೆ ಯತ್ನಿಸಲಾಗಿದೆ. ಗಾಯಗೊಂಡ ಮಹಿಳಾ ಅಧಿಕಾರಿಯನ್ನು ಸದ್ಯ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ಇಂಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

