ಕೋಟಿಗಟ್ಟಲೆ ಬೆಲೆಬಾಳುವ ಕಾರು, ಐಷಾರಾಮಿ ಮನೆ…! ಯಾವ ಸ್ಟಾರ್‌ಗೂ ಕಮ್ಮಿಯಿಲ್ಲ ಈ ʼಗೋಲ್ಡನ್‌ ಬಾಯ್‌ʼ ಬಳಿಯಿರೋ ಸಂಪತ್ತು

ದೇಶದ ಹೆಮ್ಮೆಯ ಕ್ರೀಡಾಪಟು ನೀರಜ್‌ ಛೋಪ್ರಾ. ಜಾವೆಲಿನ್‌ ಎಸೆತದಲ್ಲಿ ಒಲಿಂಪಿಕ್ಸ್‌ ಚಿನ್ನ ಗೆದ್ದಿರೋ ಗೋಲ್ಡನ್‌ ಬಾಯ್‌. ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ದೇಶಕ್ಕೆ ಗೌರವ ತಂದಿದ್ದಾರೆ. ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನೀರಜ್ ಚೋಪ್ರಾ ಹಂಗೇರಿಯ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಜಾವೆಲಿನ್ ಎಸೆತದಲ್ಲಿ ಎರಡನೇ ಪ್ರಯತ್ನದಲ್ಲಿಯೇ 88.17 ಮೀಟರ್‌ಗಳಷ್ಟು ಅದ್ಭುತವಾಗಿ ಎಸೆದು ಚಿನ್ನ ಗೆದ್ದರು. ಫೈನಲ್‌ನಲ್ಲಿ ಒಟ್ಟು ಆರು ಸುತ್ತುಗಳಿರುತ್ತವೆ.

ಇದಕ್ಕೂ ಮೊದಲು ನೀರಜ್ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಾಗ ಮೊದಲ ಬಾರಿಗೆ ಇಡೀ ದೇಶದ ಗಮನ ಸೆಳೆದರು. ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ಅವರ ಜೀವನಶೈಲಿಯಲ್ಲಿ ಭಾರಿ ಬದಲಾವಣೆಯಾಗಿದೆ. ಈಗ ಅವರ ಗ್ಯಾರೇಜಿನಲ್ಲಿ ಹಲವು ದುಬಾರಿ ಕಾರುಗಳಿವೆ. ಇದಲ್ಲದೆ ಅವರು ಅನೇಕ ದುಬಾರಿ ಬ್ರ್ಯಾಂಡ್‌ಗಳಿಗೆ ಅಂಬಾಸೆಡರ್‌ ಕೂಡ ಆಗಿದ್ದಾರೆ.

ರೇಂಜ್ ರೋವರ್ ಸ್ಪೋರ್ಟ್ಸ್‌ ಕಾರು – ನೀರಜ್ ಚೋಪ್ರಾ ಇತ್ತೀಚೆಗೆ ರೇಂಜ್ ರೋವರ್ ಸ್ಪೋರ್ಟ್ ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಎಸ್‌ಯುವಿ ಬೆಲೆ 1.98 ಕೋಟಿ ರೂಪಾಯಿಂದ ಆರಂಭವಾಗಿ 2.22 ಕೋಟಿ ರೂಪಾಯಿವರೆಗಿದೆ.  ಈ ಕಾರಿನ ಕಾರ್ಯಕ್ಷಮತೆ ಅದ್ಭುತವಾಗಿದೆ. ಇದಲ್ಲದೇ ನೀರಜ್‌ ಚೋಪ್ರಾ ಬಳಿ ಐಷಾರಾಮಿ ಸ್ಪೋರ್ಟ್ಸ್ ಕಾರು ಫೋರ್ಡ್ ಮಸ್ಟಾಂಗ್ ಜಿಟಿ ಕೂಡ ಇದೆ. ಇದರ ಬೆಲೆ 93 ಲಕ್ಷದಿಂದ 1 ಕೋಟಿ ರೂಪಾಯಿವರೆಗಿದೆ.

ಪಾಣಿಪತ್‌ನಲ್ಲಿ ಐಷಾರಾಮಿ ಮನೆಹರಿಯಾಣದ ಪಾಣಿಪತ್‌ನಲ್ಲಿ ನೀರಜ್ ಚೋಪ್ರಾ ಮೂರು ಅಂತಸ್ತಿನ ಐಷಾರಾಮಿ ಮನೆಯನ್ನು ಹೊಂದಿದ್ದಾರೆ. ಇದು ಅವರ ಅತ್ಯಂತ ಬೆಲೆಬಾಳುವ ಆಸ್ತಿಯಾಗಿದೆ. ತಾವು ಈವರೆಗೆ ಗೆದ್ದಿರುವ ಎಲ್ಲಾ ಪದಕಗಳು ಮತ್ತು ಸಾಧನೆಗಳನ್ನು ಇಲ್ಲಿ ಪ್ರದರ್ಶಿಸಿದ್ದಾರೆ. ಇನ್ನು ನೀರಜ್‌ ಬೈಕ್‌ ಪ್ರಿಯರೂ ಹೌದು. ಅವರ ಬಳಿ ಹಾರ್ಲೆ ಡೇವಿಡ್‌ಸನ್ 1200 ರೋಡ್‌ಸ್ಟರ್ ಬೈಕ್‌ ಇದೆ. ಪ್ರೀಮಿಯಂ ಕ್ರೂಸರ್ ಬೈಕ್ ಇದಾಗಿದ್ದು ಬೆಲೆ ಸುಮಾರು 11 ಲಕ್ಷ ರೂಪಾಯಿ.

ದುಬಾರಿ ಬ್ರ್ಯಾಂಡ್ ಡೀಲ್‌ಗಳು – ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ನಂತರ ನೀರಜ್ ಚೋಪ್ರಾ ಕೋಟ್ಯಂತರ ರೂಪಾಯಿ ಮೌಲ್ಯದ ಬ್ರ್ಯಾಂಡ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಬ್ರಾಂಡ್ ವ್ಯವಹಾರಗಳಿಂದ ಅವರ ಆರಂಭಿಕ ಆದಾಯ 2.5 ಕೋಟಿ ರೂಪಾಯಿ. ಈ ಮೂಲಕ ಅವರು ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂತಹ ಜನಪ್ರಿಯ ಕ್ರೀಡಾಪಟುಗಳ ಸಾಲಿಗೆ ಸೇರ್ಪಡೆಯಾಗಿದ್ದಾರೆ. ವರದಿಗಳ ಪ್ರಕಾರ ನೀರಜ್‌ ಚೋಪ್ರಾ ಅವರ ಒಟ್ಟಾರೆ ಆಸ್ತಿಯ ಮೌಲ್ಯ ಸುಮಾರು 40 ಕೋಟಿ ರೂಪಾಯಿಯಷ್ಟಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read