alex Certify ಸಾಕ್ಷ್ಯ ನೀಡಲು ಬಂದ ಸೂರಜ್ ರೇವಣ್ಣಗೆ ಶಾಕ್: ಅರಿವೇ ಇಲ್ಲದೇ ತಾನಾಗೇ ಠಾಣೆಗೆ ಬಂದು ಬಲೆಗೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಾಕ್ಷ್ಯ ನೀಡಲು ಬಂದ ಸೂರಜ್ ರೇವಣ್ಣಗೆ ಶಾಕ್: ಅರಿವೇ ಇಲ್ಲದೇ ತಾನಾಗೇ ಠಾಣೆಗೆ ಬಂದು ಬಲೆಗೆ

ಹಾಸನ: ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಡಿ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಅವರನ್ನು ಬಂಧಿಸಲಾಗಿದೆ.

ಯುವಕನ ಮೇಲೆ ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ ಬಗ್ಗೆ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಸೂರಜ್ ರೇವಣ್ಣ ವಿರುದ್ಧ 377, 342, 506ರಡಿ ಕೇಸ್ ದಾಖಲಾಗಿದೆ. ಜಾಮೀನು ರಹಿತ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಸುದೀರ್ಘ ವಿಚಾರಣೆ ನಡೆಸಿದ್ದ ಪೊಲೀಸರು ಇಂದು ಬೆಳಿಗ್ಗೆ ಅವರನ್ನು ಬಂಧಿಸಿದ್ದಾರೆ.

ಸೂರಜ್ ರೇವಣ್ಣ ಅಸಹಜ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ದೂರು ನೀಡಲಾಗಿದೆ. ಹಣಕ್ಕಾಗಿ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಎಂದು ದೂರು ನೀಡಿದಾತನ ವಿರುದ್ಧವೇ ಸೂರಜ್ ರೇವಣ್ಣ ಆಪ್ತ ಶಿವಕುಮಾರ್ ಹೊಳೆನರಸೀಪುರ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಸೂರಜ್ ರೇವಣ್ಣ ತಾವೇ ಬ್ಲಾಕ್ಮೇಲ್ ಕೇಸ್ ನಲ್ಲಿ ಸಾಕ್ಷಿ ನೀಡಲು ಬಂದಿದ್ದಾರೆ. ಆಡಿಯೋ ರೆಕಾರ್ಡ್ ಮತ್ತು ಫೋಟೋ ನೀಡಲು ಸೂರಜ್ ರೇವಣ್ಣ ಬಂದಿದ್ದು, ಈ ವೇಳೆ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಗೆ ಸಂಬಂಧಿಸಿದಂತೆ ಸಿಇಎನ್ ಠಾಣೆಯಲ್ಲಿ ವಿಚಾರಣೆಗೊಳಪಡಿಸಲಾಗಿದೆ.

ಬಂಧನದ ನಿರೀಕ್ಷೆಯಿಲ್ಲದೆ ಬಂದಿದ್ದ ಅವರನ್ನು ಬೆಳಗಿನ ಜಾವ ನಾಲ್ಕು ಗಂಟೆವರೆಗೂ ವಿಚಾರಣೆ ನಡೆಸಿದ ಪೊಲೀಸರು ಬಂಧಿಸಿದ್ದಾರೆ. ತಾನಾಗಿಯೇ ಬಂದು ಸೂರಜ್ ರೇವಣ್ಣ ಬಲೆಗೆ ಬಿಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...