ಸಾವಿನ ರೀಲ್ಸ್ ಮಾಡಲು ಹೋಗಿ ಯುವಕನೋರ್ವ ಸಾವನ್ನಪ್ಪಿದ ಘಟನೆ ತೆಲಂಗಾಣದ ವಾರಂಗಲ್ನಲ್ಲಿ ನಡೆದಿದೆ.
ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಅಜಯ್ ಎಂಬ ಯುವಕನಿಗೆ ರೀಲ್ಸ್ ಮಾಡುವ ಅಭ್ಯಾೆಸ ಇತ್ತು. ಹೊಟೇಲ್ನಿಂದ ಕೆಲಸ ಮುಗಿಸಿ ಬಂದ ಅಜಯ್ ಮಂಗಳವಾರ ರಾತ್ರಿ ರೀಲ್ಸ್ ಮಾಡಲು ಮುಂದಾಗಿದ್ದಾನೆ.
ಸಾವಿನ ರೀಲ್ಸ್ ಮಾಡುತ್ತಾ ಕುತ್ತಿಗೆಗೆ ಹಗ್ಗ ಹಾಕಿಕೊಂಡಿದ್ದಾನೆ. ವೀಡಿಯೋ ಚಿತ್ರೀಕರಣ ಹಗ್ಗ ಬಿಗಿಯಾಗಿದ್ದರಿಂದ ಬಿಡಿಸಿಕೊಳ್ಳಲು ಆಗದೇ ಆಕಸ್ಮಿಕವಾಗಿ ಆತ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಮುಂಜಾನೆ ಬೆಳಗ್ಗೆ ಅಜಯ್ ಕುಟುಂಬದವರು ಹೋಗಿ ನೋಡಿದಾಗಲೇ ಘಟನೆ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಜಯ್ ಆಕಸ್ಮಿಕವಾಗಿ ಸಾವಿಗೀಡಾಗಿದ್ದಾನೋ ಎಂಬ ಬಗ್ಗೆ ತಿಳಿದು ಬಂದಿಲ್ಲ.
రీల్స్ మోజులో ఉరేసుకుని ప్రాణాలు కోల్పోయిన యువకుడు
వరంగల్ – నర్సంపేటలో కందకట్ల అజయ్(23) అనే యువకుడికి రీల్స్ చేసే అలవాటు ఉంది.
ఉరి వేసుకుంటూ సెల్ ఫోన్లో వీడియో తీసుకోవాలి అనుకొని .. ఫ్రిజ్ మీద సెల్ ఫోన్ పెట్టి.. దూలానికి ఉరి వేసుకుంటున్న సమయంలో ఒక్కసారిగా మెడకు తాడు… pic.twitter.com/PVZahKhyot
— Telugu Scribe (@TeluguScribe) June 20, 2024

