HomeLive Newsಟಿ ಟ್ವೆಂಟಿ ವಿಶ್ವ ಕಪ್: ಇಂದು ದಕ್ಷಿಣ ಆಫ್ರಿಕಾ - ಇಂಗ್ಲೆಂಡ್ ಹಣಾಹಣಿ

ಟಿ ಟ್ವೆಂಟಿ ವಿಶ್ವ ಕಪ್: ಇಂದು ದಕ್ಷಿಣ ಆಫ್ರಿಕಾ – ಇಂಗ್ಲೆಂಡ್ ಹಣಾಹಣಿ

ನಿನ್ನೆಯ ಸೂಪರ್ 8 ಪಂದ್ಯದಲ್ಲಿ ಭಾರತ ತಂಡ ಆಫ್ಘಾನಿಸ್ತಾನದ ಎದುರು 47 ರನ್ ಗಳಿಂದ ಭರ್ಜರಿ ಜಯ ಸಾಧಿಸುವ ಮೂಲಕ ಶುಭಾರಂಭ ಮಾಡಿದೆ. ಇಂದು ಬೆಳಗಿನ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ಮುಖಾಮುಖಿಯಾಗಿದ್ದು, ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ ತಂಡ 140 ರನ್ ಗಳ ಸಾಧಾರಣ ಮೊತ್ತ ದಾಖಲಿಸಿದೆ.

ಇಂದು ಸೂಪರ್ 8ನ ಮತ್ತೊಂದು ಪಂದ್ಯದಲ್ಲಿ ಬಲಿಷ್ಠ ತಂಡಗಳಾದ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿದ್ದು, ಕ್ರಿಕೆಟ್ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಎರಡು ತಂಡಗಳು ಈಗಾಗಲೇ ತಮ್ಮ ಮೊದಲ ಪಂದ್ಯದಲ್ಲಿ ಜಯಭೇರಿ ಆಗಿದ್ದು, ಸೆಮಿ ಫೈನಲ್ ಸ್ಥಾನವನ್ನು ಖಚಿತಪಡಿಸಲು ಇಂದು ಭರ್ಜರಿ ಹೋರಾಟ  ನಡೆಸಲಿವೆ.

For Latest News Updates, Join Our Whatsapp Community🚩
RELATED ARTICLES

Most Popular