alex Certify ಗುಂಡಿಕ್ಕಿ ರೌಡಿಶೀಟರ್ ಅಶೋಕ ಮಲ್ಲಪ್ಪ ಹತ್ಯೆ ಮಾಡಿದ್ದ ಇಬ್ಬರು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಂಡಿಕ್ಕಿ ರೌಡಿಶೀಟರ್ ಅಶೋಕ ಮಲ್ಲಪ್ಪ ಹತ್ಯೆ ಮಾಡಿದ್ದ ಇಬ್ಬರು ಅರೆಸ್ಟ್

ವಿಜಯಪುರ: ರೌಡಿಶೀಟರ್ ಅಶೋಕ ಮಲ್ಲಪ್ಪ ಹತ್ಯೆ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕೊಲೆ ಸೇರಿದಂತೆ ಹಲವು ಕೇಸ್ ಗಳಲ್ಲಿ ಅಶೋಕ ಮಲ್ಲಪ್ಪ ಭಾಗಿಯಾಗಿದ್ದ ಅಶೋಕ ಪೆರೋಲ್ ಮೇಲೆ ಹೊರಗೆ ಬಂದಿದ್ದ.

ಅಶೋಕನನ್ನು ಜೂನ್ 16ರಂದು ಗುಂಡಿಟ್ಟು ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣ ನಿವಾಸಿಗಳಾದ ಇಸ್ಮಾಯಿಲ್ ಶೇಕ್ ಮತ್ತು ಜಾಫರ್ ಮಸಳೆ ಅವರನ್ನು ಬಂಧಿಸಲಾಗಿದೆ.

ಬಂಧಿತರಿಂದ ಒಂದು ನಾಡ ಪಿಸ್ತೂಲು, ಮೂರು ಸಜೀವ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಪಟ್ಟಣ ಪಂಚಾಯಿತಿ ಚುನಾವಣೆ, ಹಳೇ ದ್ವೇಷದ ಹಿನ್ನೆಲೆಯಲ್ಲಿ ಅಶೋಕ ಮಲ್ಲಪ್ಪನ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದರು. ಅಶೋಕ ಮಲ್ಲಪ್ಪ ಕೊಲೆಯ ಪ್ರಕರಣದ ಇತರೆ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದು ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೋನೆಮನೆ ಮಾಹಿತಿ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...