HomeEntertainment'ಕೃಷ್ಣನ್ ಲವ್ ಸ್ಟೋರಿ' ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 14 ವರ್ಷ

‘ಕೃಷ್ಣನ್ ಲವ್ ಸ್ಟೋರಿ’ ಸಿನಿಮಾ ತೆರೆ ಮೇಲೆ ಬಂದು ಇಂದಿಗೆ 14 ವರ್ಷ

ಅಜಯ್ ರಾವ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ‘ಕೃಷ್ಣನ್ ಲವ್ ಸ್ಟೋರಿ’ ಚಿತ್ರ 2010 ಜೂನ್ 18ರಂದು ರಾಜ್ಯಾದ್ಯಂತ ತೆರೆಕಂಡಿತ್ತು, ಪ್ರೇಮಿಗಳ ಕುರಿತ ಈ ಸಿನಿಮಾ ಕಥೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಇದರ ಹಾಡುಗಳಂತೂ ಇಂದಿಗೂ ಎಲ್ಲರ ಬಾಯಲ್ಲಿ ನಲಿದಾಡುತ್ತಿವೆ. ಕೃಷ್ಣನ್ ಲವ್ ಸ್ಟೋರಿ ಬಿಡುಗಡೆಯಾಗಿ ಇಂದಿಗೆ 14 ವರ್ಷಗಳಾಗಿದ್ದು, ಈ ಸಂತಸವನ್ನು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲಿ ಅಜಯ್ ರಾವ್ ಮತ್ತು ರಾಧಿಕಾ ಪಂಡಿತ್ ಸೇರಿದಂತೆ ಉಮಾಶ್ರೀ, ಅಚ್ಯುತ್ ಕುಮಾರ್, ಶರಣ್, ಪ್ರದೀಪ್ ಬೋಗಾದಿ, ಪವನ್ ಬೆನಕ, ಪಿಎನ್ ಸತ್ಯ, ರಿತೇಶ್, ಕೆಂಪೇಗೌಡ, ಮಾಸ್ಟರ್ ರಾಕೇಶ್, ಮಾಸ್ಟರ್ ಮಂಜು, ಹರ್ಷ, ಅಶೋಕ್ ರಾವ್, ಕಡ್ಡಿಪುಡಿ ಚಂದ್ರು, ಶಶಾಂಕ್, ಪದ್ಮಜಾ ರಾವ್, ಲಕ್ಷ್ಮೀ ಹೆಗಡೆ, ನೀನಾಸಂ ಅಶ್ವಥ್, ಜಡಿ ಆಕಾಶ್ ತೆರೆ ಹಂಚಿಕೊಂಡಿದ್ದರು.

ಶ್ರೀಧರ್ ವಿ ಸಂಭ್ರಮ ಸಂಗೀತ ಸಂಯೋಜನೆ ನೀಡಿದ್ದು, ಕೆಎಮ್ ಪ್ರಕಾಶ್ ಸಂಕಲನ, ಶೇಖರ್ ಚಂದ್ರ ಛಾಯಾಗ್ರಹಣವಿದೆ. ಉದಯ್ ಕೆ. ಮೆಹ್ತಾ ನಿರ್ಮಾಣ ಮಾಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular