HomeLive Newsಟಿ20 ವಿಶ್ವಕಪ್: ನಾಳೆ ಸೂಪರ್ 8ನ ಮೊದಲ ಪಂದ್ಯದಲ್ಲಿ ಯುಎಸ್ಎ - ದಕ್ಷಿಣ ಆಫ್ರಿಕಾ ಮುಖಾಮುಖಿ

ಟಿ20 ವಿಶ್ವಕಪ್: ನಾಳೆ ಸೂಪರ್ 8ನ ಮೊದಲ ಪಂದ್ಯದಲ್ಲಿ ಯುಎಸ್ಎ – ದಕ್ಷಿಣ ಆಫ್ರಿಕಾ ಮುಖಾಮುಖಿ

 

ಟಿ20 ವಿಶ್ವಕಪ್ ನ ಸೂಪರ್ 8 ಪಂದ್ಯಗಳು ನಾಳೆಯಿಂದ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ಮತ್ತು ಅಮೆರಿಕ ಮುಖಾಮುಖಿಯಾಗಲಿವೆ. ಇದೇ  ಮೊದಲ ಬಾರಿಗೆ ವಿಶ್ವಕಪ್ ನಲ್ಲಿ ಸ್ಥಾನ ಪಡೆದಿರುವ ಯುಎಸ್ಎ ತಂಡ ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನವನ್ನು ಬಗ್ಗು ಬಡಿಯುವ ಮೂಲಕ  ಸೂಪರ್ 8ಗೆ ಬರದಂತೆ ಮಾಡಿತು. ಯುಎಸ್ಎ ತಂಡ ಇದೀಗ ದಕ್ಷಿಣ ಆಫ್ರಿಕಾ ತಂಡಕ್ಕೂ ಆಘಾತ ನೀಡಲು ಸಜ್ಜಾಗಿದೆ.

ದಕ್ಷಿಣ ಆಫ್ರಿಕಾ ತಂಡ ಪ್ರತಿ ವಿಶ್ವ ಕಪ್ ನಲ್ಲೂ ಒಳ್ಳೆಯ ಪ್ರದರ್ಶನ ತೋರುತ್ತಾ ಬಂದರೂ ಸೆಮಿ ಫೈನಲ್ ಹಂತದಲ್ಲಿ ಎಡುವುತ್ತಿದ್ದಾರೆ. ಚೋಕರ್ಸ್ ಎಂದೆ ಕರೆಸಿಕೊಳ್ಳುವ ಇವರು ಈ ಬಾರಿಯಾದರೂ ಇದರಿಂದ ಹೊರಬರಲಿದ್ದಾರಾ ಎಂಬುದನ್ನು ಕಾದು ನೋಡಬೇಕಾಗಿದೆ. ಯುಎಸ್ಎ ತಂಡದಲ್ಲಿ ಭಾರತೀಯ ಮೂಲದ ಐವರು ಆಟಗಾರರು ಬೆನ್ನೆಲುಬಾಗಿ ನಿಂತಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್ ನಲ್ಲಿ ಮಿಂಚುತ್ತಿದ್ದಾರೆ. ಕ್ರಿಕೆಟ್ ಪ್ರೇಮಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular