ಬೆಂಗಳೂರು : ಕೌಟುಂಬಿಕ ಕಲಹದಿಂದ ನಡೆದ ಜಗಳದಲ್ಲಿ ಮಗನೇ ದೊಣ್ಣೆಯಿಂದ ಹೊಡೆದು ಚಿಕ್ಕಮ್ಮನನ್ನು ಕೊಂದ ಘಟನೆ ಬೆಂಗಳೂರು ಗ್ರಾಮಾಂತರದ ಹೊಸಕೋಟೆಯ ಸಿದ್ದಾರ್ಥ್ ನಗರದ ಬಳಿ ನಡೆದಿದೆ.
ಮೃತರನ್ನು ಚಂದ್ರಮ್ಮ (40) ಎಂದು ಗುರುತಿಸಲಾಗಿದೆ, ಆರೋಪಿ ವೆಂಕಟೇಶ್ ಎಂಬಾತ ಕೊಲೆ ಮಾಡಿ ನಾಪತ್ತೆಯಾಗಿದ್ದಾನೆ.
ದೇವಸ್ಥಾನಕ್ಕೆ ಹೋಗಿ ಚಂದ್ರಮ್ಮ ಮನೆಗೆ ವಾಪಸ್ ಆಗುತ್ತಿದ್ದಾಗ ಬೈಕ್ ಅಡ್ಡಗಟ್ಟಿದ ವೆಂಕಟೇಶ್ ಚಂದ್ರಮ್ಮನ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಚಂದ್ರಮ್ಮ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.