HomeIndiaಕೆಲಸ ಮಾಡಲು ಕಳ್ಳಾಟವಾಡುವ ನೌಕರರಿಗೆ ಶಾಕ್: ಲೇಟಾಗಿ ಬಂದು ಬೇಗನೆ ಹೋಗುವ ನೌಕರರ ವಿರುದ್ಧ ಕಠಿಣ...

ಕೆಲಸ ಮಾಡಲು ಕಳ್ಳಾಟವಾಡುವ ನೌಕರರಿಗೆ ಶಾಕ್: ಲೇಟಾಗಿ ಬಂದು ಬೇಗನೆ ಹೋಗುವ ನೌಕರರ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಸರ್ಕಾರ

ನವದೆಹಲಿ: ಕಚೇರಿಗೆ ತಡವಾಗಿ ಬಂದು ಬೇಗನೆ ವಾಪಸ್ ಹೋಗುವುದನ್ನೇ ರೂಢಿಸಿಕೊಂಡಿರುವ ನೌಕರರನ್ನು ಗಂಭೀರವಾಗಿ ಪರಿಗಣಿಸುವಂತೆ ಎಲ್ಲಾ ಪ್ರಾಧಿಕಾರಗಳಿಗೆ ಕೇಂದ್ರ ಸರ್ಕಾರದಿಂದ ಸೂಚನೆ ನೀಡಲಾಗಿದೆ. ಈ ರೀತಿ ತಡವಾಗಿ ಬಂದು ಬೇಗನೆ ಹೋಗುವ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ.

ಅನೇಕ ನೌಕರರು ಆಧಾರ್ ಎನೇಬಲ್ಡ್ ಬಯೋಮೆಟ್ರಿಕ್ ಅಟೆಂಡೆನ್ಸ್ ಸಿಸ್ಟಂ(AEBAS) ಹಾಜರಾತಿ ನೋಂದಾಯಿಸುತ್ತಿಲ್ಲ. ಅಲ್ಲದೆ, ಅನೇಕರು ತಡವಾಗಿ ಕಚೇರಿಗೆ ಬಂದು ಬಹು ಬೇಗನೆ ಹೋಗುವುದನ್ನೇ ರೂಢಿಸಿಕೊಂಡಿದ್ದಾರೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕ್ರಮಕ್ಕೆ ಮುಂದಾಗಿದೆ.

ಮೊಬೈಲ್ ಫೋನ್ ಆಧಾರಿತ ಫೇಸ್ ಅಥೆಂಟಿಫಿಕೇಶನ್ ಸಿಸ್ಟಮ್ ಅಳವಡಿಸಿಕೊಳ್ಳುವಂತೆ ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.  ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಗಳಿಗೂ ಈ ಆದೇಶ ಅನ್ವಯವಾಗಲಿದೆ. ಕಚೇರಿಗೆ ತಡವಾಗಿ ಬಂದು ಬೇಗನೆ ವಾಪಸ್ ಹೋಗುವುದನ್ನು ಅಭ್ಯಾಸ ಮಾಡಿಕೊಂಡ ನೌಕರರನ್ನು ಗಂಭೀರವಾಗಿ ಪರಿಗಣಿಸುವಂತೆ ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular