HomeEntertainmentಚಂದನ್ ಶೆಟ್ಟಿ ಅಭಿನಯದ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಚಿತ್ರದ ಸ್ಟೂಡೆಂಟ್ ಪಾರ್ಟಿ ಸಾಂಗ್ ರಿಲೀಸ್

ಚಂದನ್ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟೂಡೆಂಟ್ ಪಾರ್ಟಿ ಸಾಂಗ್ ರಿಲೀಸ್

ಅರುಣ್ ಅಮುಕ್ತ ನಿರ್ದೇಶನದ ಚಂದನ್ ಶೆಟ್ಟಿ ಅಭಿನಯದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಚಿತ್ರದ ಸ್ಟುಡೆಂಟ್ ಪಾರ್ಟಿ ಹಾಡು ಟಿ ಸಿರೀಸ್ ಕನ್ನಡ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿಗೆ ಚಂದನ್ ಶೆಟ್ಟಿ ಮತ್ತು ವಿಜೇತ್ ಕೃಷ್ಣ ಧ್ವನಿಯಾಗಿದ್ದು, ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ.

ವೆರೈಟಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಹಾಗೂ ಶಿವಲಿಂಗೇಗೌಡ  ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಂದನ್ ಶೆಟ್ಟಿ ಸೇರಿದಂತೆ ಸಿಂಚನಾ, ಕಾಕ್ರೋಚ್ ಸುಧಿ, ಮನೋಜ್ ವಿವನ್, ಮಾನಸ್ವಿ, ಭಾವನ ಅಪ್ಪು,  ಅಮರ್, ಭವ್ಯಾ, ಪ್ರಶಾಂತ್ ಸಂಬರ್ಗಿ, ರಘು ರಾಮನಕೊಪ್ಪ, ಸುನೀಲ್ ಪುರಾಣಿಕ್,   ತೆರೆ ಹಂಚಿಕೊಂಡಿದ್ದಾರೆ. ಪವನ್ ಗೌಡ  ಸಂಕಲನವಿದ್ದು, ನರಸಿಂಹ ಹಾಗೂ ಟೈಗರ್ ಶಿವು ಅವರ ಸಾಹಸ ನಿರ್ದೇಶನ, ಭಜರಂಗಿ ಮೋಹನ್ ನೃತ್ಯ ನಿರ್ದೇಶನ, ಕುಮಾರ್ ಗೌಡ  ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular