ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮತ್ತೊಂದು ಡೀಪ್ ಫೇಕ್ ವೀಡಿಯೊ ವೈರಲ್ ಆಗಿದ್ದು. ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ .
ಎಐ-ರಚಿಸಿದ ವೀಡಿಯೊದಲ್ಲಿ, ಆಲಿಯಾ ಜಿಆರ್ಡಬ್ಲ್ಯೂಎಂ (ಗೆಟ್ ರೆಡಿ ವಿತ್ ಮಿ) ಟ್ರೆಂಡ್ ಗೆ ಸೇರಿದ್ದಾರೆ. ಸಮೀಕ್ಷಾ ಅವ್ತ್ರಾ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊ ಈಗಾಗಲೇ 17 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಎಐ ತಂತ್ರಜ್ಞಾನದ ಬಳಸಿಕೊಂಡು ಕಿಡಿಗೇಡಿಗಳು ಆಲಿಯಾ ಭಟ್ ಮುಖವನ್ನು ಬೇರೆ ನಟಿಯ ದೇಹಕ್ಕೆ ಜೋಡಿಸಿ ಮಾರ್ಫ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಆಲಿಯಾ ಭಟ್ ಫೇಕ್ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.