HomeKarnatakaನನ್ನ ಪತಿ ತಪ್ಪು ಮಾಡಿದ್ರೆ ಬೈದು ವಾರ್ನಿಂಗ್ ಕೊಡಬೇಕಿತ್ತು; ದೊಡ್ಡ ನಟನಾಗಿ ವಿಕೃತವಾಗಿಚಿತ್ರಹಿಂಸೆ ನೀಡಿ ಕೊಲೆ...

ನನ್ನ ಪತಿ ತಪ್ಪು ಮಾಡಿದ್ರೆ ಬೈದು ವಾರ್ನಿಂಗ್ ಕೊಡಬೇಕಿತ್ತು; ದೊಡ್ಡ ನಟನಾಗಿ ವಿಕೃತವಾಗಿಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ; ಕಣ್ಣೀರಿಟ್ಟ ರೇಣುಕಾಸ್ವಾಮಿ ಪತ್ನಿ

ಚಿತ್ರದುರ್ಗ: ನಟ ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಣುಕಾಸ್ವಾಮಿ ಪತ್ನಿ ಸಹನಾ, ಪತಿಯ ಸಾವಿಗೆ ನ್ಯಾಯ ಕೊಡಿಸುವಂತೆ ಕಣ್ಣೀರಿಟ್ಟಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ರೇಣುಕಾಸ್ವಾಮಿ ಪತ್ನಿ ಸಹನಾ, ನನ್ನ ಗಂಡನನ್ನು ವಿಕೃತವಾಗಿ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ. ನಾನು 5 ತಿಂಗಳ ಗರ್ಭಿಣಿ. ಪತಿ ಇಲ್ಲದೇ ಹೇಗೆ ಇರಲಿ? ಮಗು ಹುಟ್ಟಿದ ಮೇಲೆ ಪಾಪುಗೆ ಏನೆಂದು ಹೇಳಲಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ನನ್ನ ಪತಿ ತಾನಾಯಿತು, ತನ್ನ ಕೆಲಸವಾಯಿತು ಎಂದು ಇದ್ದವರು. ಒಂದು ವೇಳೆ ನನ್ನ ಪತಿ ತಪ್ಪು ಮಾಡಿದ್ದರೆ ಕರೆದು ಬೈದು ಬುದ್ಧಿ ಹೇಳಿ ವಾರ್ನಿಂಗ್ ಕೊಟ್ಟು ಕಳುಹಿಸಬೇಕಿತ್ತು. ಈ ರೀತಿ ಚಿಂತ್ರ ಹಿಂಸೆ ನೀಡಿ ಕೊಲೆ ಮಾಡುವಷ್ಟರ ಮಟ್ಟಕ್ಕೆ ಮನುಷತ್ವವನ್ನು ಕಳೆದುಕೊಂಡಿದ್ದು ಯಾಕೆ? ಒಬ್ಬ ದೊಡ್ಡ ನಟನಾಗಿ ಒಬ್ಬ ವ್ಯಕ್ತಿಯ ಜೀವವನ್ನು ತೆಗೆದಿದ್ದಾರೆ. ವಯಸ್ಸಾದ ತಂದೆ-ತಾಯಿ ಇದ್ದಾರೆ. ಗರ್ಭಿಣಿ ಪತ್ನಿ ಏನು ಮಾಡಬೇಕು? ಕೊಲೆ ಮಾಡಿರುವ ಎಲ್ಲರಿಗೂ ಕಠಿಣ ಶಿಕ್ಷೆಯಾಗಬೇಕು. ಪತಿ ಸಾವಿಗೆ ನ್ಯಾಯ ಕೊಡಿಸಿ ಎಂದು ಗೋಗರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪತಿ ಎಂದಿನಂತೆ ಡ್ಯೂಟಿಗೆ ಹೋಗಿದ್ದಾರೆ. ಶನಿವಾರ ಸಂಜೆ 7:30ಕ್ಕೆ ಪತಿಯ ಫೋನ್ ಸ್ವಿಚ್ಡ್ ಆಫ್ ಆಗಿದೆ. ಮೋಸದಿಂದ ಕರೆದೊಯ್ದು ಚಿತ್ರ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾರೆ. ಟಿವಿಯಲ್ಲಿ ನೋಡಿದಾಗಲೇ ವಿಷಯಗೊತ್ತಾಗಿದೆ ಎಂದು ಕಣ್ಣೀರಿಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular