HomeIndiaಸರ್ಕಾರ ರಚಿಸಿದ ಮರುದಿನವೇ ಕೇಂದ್ರದಿಂದ ಕೊಡುಗೆ: ರಾಜ್ಯಕ್ಕೆ 5096 ಕೋಟಿ ರೂ. ಬಿಡುಗಡೆ

ಸರ್ಕಾರ ರಚಿಸಿದ ಮರುದಿನವೇ ಕೇಂದ್ರದಿಂದ ಕೊಡುಗೆ: ರಾಜ್ಯಕ್ಕೆ 5096 ಕೋಟಿ ರೂ. ಬಿಡುಗಡೆ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರಚನೆಯಾದ ಮರುದಿನವೇ ರಾಜ್ಯಕ್ಕೆ 5096 ಕೋಟಿ ರೂ. ತೆರಿಗೆ ಪಾಲು ಬಿಡುಗಡೆ ಮಾಡಲಾಗಿದೆ.

ಸರ್ಕಾರ ರಚಿಸಿದ ಮರುದಿನವೇ ಪ್ರಸಕ್ತ ಹಣಕಾಸು ವರ್ಷದಲ್ಲಿ ಜೂನ್ ತಿಂಗಳ ರಾಜ್ಯಗಳ ತೆರಿಗೆ ಪಾಲನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆಗೊಳಿಸಿದ್ದು, ರಾಜ್ಯಕ್ಕೆ 5096.72 ಕೋಟಿ ರೂ. ನೀಡಲಾಗಿದೆ. 2024ರ ಜೂನ್ ನಲ್ಲಿ ಒಟ್ಟು 1.39.750 ಕೋಟಿ ರೂ. ರಾಜ್ಯಗಳ ಪಾಲನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಇದರಿಂದ ರಾಜ್ಯ ಅಭಿವೃದ್ಧಿ ಮತ್ತು ಬಂಡವಾಳ ವೆಚ್ಚ ವೇಗ ಪಡೆದುಕೊಳ್ಳಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2024 -25ರ ಮಧ್ಯಂತರ ಬಜೆಟ್ ನಲ್ಲಿ ರಾಜ್ಯಗಳಿಗೆ ತೆರಿಗೆ ಹಂಚಿಕೆಯಾಗಿ 12.19.793 ಕೋಟಿ ರೂ. ಪ್ರಸ್ತಾವನೆ ಒಳಗೊಂಡಿದೆ. ಇದುವರೆಗೆ 2,79,500 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಹಂಚಿಕೆ ಮಾಡಲಾಗಿದೆ.

ಕೇಂದ್ರದಿಂದ ಯಾವುದೇ ವಿಶೇಷ ಅನುದಾನ ನೀಡಿಲ್ಲ. ರಾಜ್ಯದ ಪಾಲನ್ನು ಪ್ರಸಾದದ ರೀತಿ ಹಂಚಲಾಗಿದೆ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯೆ ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular