HomeInternationalಭಾರತ -ಪಾಕ್ ಹೈವೋಲ್ಟೇಜ್ ಪಂದ್ಯ: ಟೀಂ ಇಂಡಿಯಾವೇ ಗೆಲ್ಲುತ್ತೆ ಎಂದು 5 ಕೋಟಿ ರೂ. ಬೆಟ್...

ಭಾರತ -ಪಾಕ್ ಹೈವೋಲ್ಟೇಜ್ ಪಂದ್ಯ: ಟೀಂ ಇಂಡಿಯಾವೇ ಗೆಲ್ಲುತ್ತೆ ಎಂದು 5 ಕೋಟಿ ರೂ. ಬೆಟ್ ಕಟ್ಟಿದ ಕೆನಡಾ ರಾಪರ್ ಡ್ರೇಕ್

ನ್ಯೂಯಾರ್ಕ್‌ ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಲಿರುವ ಬಹು ನಿರೀಕ್ಷಿತ T20 ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ –ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಕೆನಡಾದ ರಾಪರ್ ಆಬ್ರೆ ಡ್ರೇಕ್ ಗ್ರಹಾಂ ಅವರು ಟೀಮ್ ಇಂಡಿಯಾ ಪರವಾಗಿ 5 ಕೋಟಿ ರೂ. ಬಾಜಿ ಕಟ್ಟಿದ್ದಾರೆ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಒಂಬತ್ತನೇ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮುಖಾಮುಖಿಯಾಗಲಿವೆ. ಕೆನಡಾದ ರಾಪರ್ ಡ್ರೇಕ್ ಕ್ರಿಕೆಟ್ ಬಗ್ಗೆ ಬಾಜಿ ಕಟ್ಟಿದ್ದು ಇದೇ ಮೊದಲಲ್ಲ. IPL 2024 ರ ಫೈನಲ್‌ಗೆ ಮುಂಚಿತವಾಗಿ ಕೆಕೆಆರ್ ಪರ ಬಾಜಿ ಕಟ್ಟಿದ್ದರು. ಸನ್‌ರೈಸರ್ಸ್ ಹೈದರಾಬಾದ್‌ ವಿರುದ್ಧದ ಫೈನಲ್ ಗೆದ್ದು ಕೋಲ್ಕತ್ತಾ ನೈಟ್ ರೈಡರ್ಸ್‌ ಚಾಂಪಿಯನ್ ಆಗಿತ್ತು. ಕೆಕೆಆರ್ ಪರ ಬಾಜಿ ಕಟ್ಟಿ 2 ಕೋಟಿ ರೂ. ತನ್ನದಾಗಿಸಿಕೊಂಡಿದ್ದರು.

ಇಂದು ನಡೆಯಲಿರುವ ಪಾಕ್ –ಇಂಡಿಯಾ ಪಂದ್ಯದಲ್ಲಿ ಭಾರತದ ಪರ ಡ್ರೇಕ್ ಬೆಟ್ಟಿಂಗ್ ಕಟ್ಟಿದ್ದಾರೆ. ಬೆಟ್ಟಿಂಗ್ ಪ್ರಿಯರಿಗೆ ಭಾರತವೇ ಫೇವರಿಟ್ ತಂಡವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular