HomeIndiaಕೇವಲ 48 ಮತಗಳ ಅಂತರದಿಂದ ಗೆದ್ದ ಶಿವಸೇನೆ ಅಭ್ಯರ್ಥಿ: ಇಲ್ಲಿದೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ...

ಕೇವಲ 48 ಮತಗಳ ಅಂತರದಿಂದ ಗೆದ್ದ ಶಿವಸೇನೆ ಅಭ್ಯರ್ಥಿ: ಇಲ್ಲಿದೆ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದಲ್ಲಿ ಗೆದ್ದವರ ವಿವರ

ಮುಂಬೈ: 2024 ರ ಲೋಕಸಭಾ ಚುನಾವಣೆಯಲ್ಲಿ, ಶಿವಸೇನಾ(ಶಿಂಧೆ ಬಣ) ಅಭ್ಯರ್ಥಿ ರವೀಂದ್ರ ವೈಕರ್ ಅವರು ಮುಂಬೈ ವಾಯುವ್ಯ ಕ್ಷೇತ್ರದಲ್ಲಿ ಕೇವಲ 48 ಮತಗಳಿಂದ ಶಿವಸೇನಾ UBT ಅಭ್ಯರ್ಥಿ ಅಮೋಲ್ ಗಜಾನನ್ ಕೀರ್ತಿಕರ್ ಅವರನ್ನು ಸೋಲಿಸಿ ಅತ್ಯಂತ ಕಡಿಮೆ ಅಂತರದಿಂದ ಜಯ ಸಾಧಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಅತಿ ಕಡಿಮೆ ಅಂತರದ ಗೆಲುವಿನ ದಾಖಲೆ ಇಬ್ಬರ ಹೆಸರಲ್ಲಿದೆ. ಅನಕಾಪಲ್ಲಿಯಿಂದ ಕೊನತ್ತಲ ರಾಮಕೃಷ್ಣ ಮತ್ತು ಬಿಹಾರದ ರಾಜಮಹಲ್‌ನಿಂದ ಸೋಮ್ ಮರಾಂಡಿ ಅವರು 1989 ಮತ್ತು 1998 ರಲ್ಲಿ ಕ್ರಮವಾಗಿ ಒಂಬತ್ತು ಮತಗಳಿಂದ ಗೆದ್ದಿದ್ದಾರೆ.

ಈ ಚುನಾವಣೆಯಲ್ಲಿ, ಕೇರಳದ ಅಟ್ಟಿಂಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಡೂರ್ ಪ್ರಕಾಶ್ 684 ಮತಗಳಿಂದ ಜಯಗಳಿಸುವ ಮೂಲಕ ಎರಡನೇ ಅತಿ ಕಡಿಮೆ ಅಂತರವನ್ನು ಪಡೆದರು. ಜೈಪುರ ಗ್ರಾಮಾಂತರದಿಂದ ಬಿಜೆಪಿಯ ರಾವ್ ರಾಜೇಂದ್ರ ಸಿಂಗ್ (1,615 ಮತಗಳು) ಮತ್ತು ಛತ್ತೀಸ್‌ಗಢದ ಕಂಕೇರ್‌ನಿಂದ ಅವರ ಪಕ್ಷದ ಸಹೋದ್ಯೋಗಿ ಬ್ರೋಜರಾಜ್ ನಾಗ್(1,884 ಮತಗಳು) 2,000 ಮತಗಳಿಗಿಂತ ಕಡಿಮೆ ಅಂತರದಿಂದ ಗೆದ್ದ ಅಭ್ಯರ್ಥಿಗಳಲ್ಲಿ ಸೇರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲೋಕಸಭೆ ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಗೆದ್ದ ಇತರ ಅಭ್ಯರ್ಥಿಗಳೆಂದರೆ ಉತ್ತರ ಪ್ರದೇಶದ ಫರೂಕಾಬಾದ್‌ನಿಂದ ಬಿಜೆಪಿಯ ಮುಖೇಶ್ ರಜಪೂತ್(2,678 ಮತಗಳು), ಬಿಜೆಪಿಯ ಪ್ರವೀಣ್ ಪಟೇಲ್ ಫುಲ್ಪುರ(4,332 ಮತಗಳು), ಪಂಜಾಬ್‌ನ ಫಿರೋಜ್‌ಪುರದಿಂದ ಕಾಂಗ್ರೆಸ್‌ನ ಶೇರ್ ಸಿಂಗ್ ಘುಬಯಾ(3,242 ಮತಗಳು). ಚಂಡೀಗಢದಿಂದ ಹಿರಿಯ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ(2,504 ಮತಗಳು), ಲಕ್ಷದ್ವೀಪದಿಂದ ಕಾಂಗ್ರೆಸ್‌ನ ಮುಹಮ್ಮದ್ ಹಮ್ದುಲ್ಲಾ ಸಯೀದ್(2,647 ಮತಗಳು) ಮತ್ತು ಉತ್ತರ ಪ್ರದೇಶದ ಧೌರಾಹ್ರಾದಿಂದ ಸಮಾಜವಾದಿ ಪಕ್ಷದ ಆನಂದ್ ಭದೌರಿಯಾ(4,449 ಮತಗಳು).

ಉತ್ತರ ಪ್ರದೇಶದ ಬನ್ಸ್‌ಗಾಂವ್‌ನಿಂದ ಬಿಜೆಪಿಯ ಕಮಲೇಶ್ ಪಾಸ್ವಾನ್ 3,150 ಮತಗಳ ಅಂತರದಿಂದ, ಬಿಷ್ಣುಪುರದಿಂದ ಕೇಸರಿ ಪಕ್ಷದ ಸೌಮಿತ್ರಾ ಖಾನ್ 5,567 ಮತಗಳಿಂದ, ತೆಲಂಗಾಣದ ಮಹಬೂಬ್‌ನಗರದಿಂದ ಅದರ ಅಭ್ಯರ್ಥಿ ಅರುಣಾ ಡಿಕೆ 4,500 ಮತಗಳಿಂದ ಗೆದ್ದಿದ್ದಾರೆ. ಸಮಾಜವಾದಿ ಪಕ್ಷದ ಅಜೇಂದ್ರ ಸಿಂಗ್ ಲೋಧಿ ಅವರು ಉತ್ತರ ಪ್ರದೇಶದ ಹಮೀರ್‌ಪುರದಿಂದ 2,629 ಮತಗಳಿಂದ ಗೆದ್ದಿದ್ದರೆ, ಸೇಲಂಪುರದಿಂದ ಅದರ ಅಭ್ಯರ್ಥಿ ರಾಮಶಂಕರ್ ರಾಜ್‌ಭರ್ 3,573 ಮತಗಳಿಂದ ಜಯಗಳಿಸಿದ್ದಾರೆ.

ಪಶ್ಚಿಮ ಬಂಗಾಳದ ಅರಾಂಬಾಗ್ ಕ್ಷೇತ್ರದಿಂದ ತೃಣಮೂಲ ಕಾಂಗ್ರೆಸ್‌ನ ಮಿತಾಲಿ ಬಾಗ್ 6,399 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿನ ಇತ್ತೀಚಿನ ಟ್ರೆಂಡ್‌ಗಳ ಪ್ರಕಾರ, ಕಾಂಗ್ರೆಸ್‌ನ ಮಾಣಿಕ್ಕಂ ಟ್ಯಾಗೋರ್ ತಮಿಳುನಾಡಿನ ವಿರುದುನಗರದಿಂದ 4,633 ಮತಗಳಿಂದ ಮುನ್ನಡೆಯಲ್ಲಿದ್ದರೆ, ಮಹಾರಾಷ್ಟದ ಧುಲೆಯಲ್ಲಿ ಗ್ರ್ಯಾಂಡ್ ಓಲ್ಡ್ ಪಕ್ಷದ ಬಚ್ಚವ್ ಶೋಭಾ ದಿನೇಶ್ 3,831 ಮತಗಳಿಂದ ಮುಂದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular