HomeIndiaಕಳೆದ ಬಾರಿ ಹರಿಯಾಣದಲ್ಲಿ ಹತ್ತೂ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ 'ಬಿಗ್ ಶಾಕ್'

ಕಳೆದ ಬಾರಿ ಹರಿಯಾಣದಲ್ಲಿ ಹತ್ತೂ ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿಗೆ ಈ ಬಾರಿ ‘ಬಿಗ್ ಶಾಕ್’

ಈ ಬಾರಿಯ ಲೋಕಸಭಾ ಚುನಾವಣಾ ಮತ ಎಣಿಕೆ ಕಾರ್ಯ ಬಿರುಸಿನಿಂದ ಸಾಗಿದ್ದು, ಭಾರಿ ಬಹುಮತದೊಂದಿಗೆ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಗೇರುವ ಕನಸು ಕಾಣುತ್ತಿದ್ದ ಬಿಜೆಪಿಗೆ ಕೆಲ ರಾಜ್ಯಗಳ ಮತದಾರರು ಬಿಗ್ ಶಾಕ್ ನೀಡಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶ, ಹರಿಯಾಣ ಮೊದಲಾದ ಕಡೆ ಬಿಜೆಪಿ ಭರ್ಜರಿ ಪರ್ಫಾರ್ಮೆನ್ಸ್ ಮಾಡಿದ್ದು, ಆದರೆ ಈ ಬಾರಿ ಎರಡು ರಾಜ್ಯದಲ್ಲೂ ಒಂದಷ್ಟು ಹಿನ್ನಡೆ ಅನುಭವಿಸಿದೆ.

ಅದರಲ್ಲೂ ಕಳೆದ ಎರಡು ಅವಧಿಯಲ್ಲೂ ಹತ್ತಕ್ಕೆ ಹತ್ತೂ ಕ್ಷೇತ್ರಗಳನ್ನು ಗೆದ್ದಿದ್ದ ಹರಿಯಾಣದಲ್ಲಿ ಈ ಬಾರಿ ಮತದಾರರು ಬಿಗ್ ಶಾಕ್ ನೀಡಿದ್ದಾರೆ. ಹತ್ತು ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಏಳರಲ್ಲಿ ಹಾಗೂ ಬಿಜೆಪಿ ಮೂರರಲ್ಲಿ ಮುನ್ನಡೆ ಸಾಧಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular