HomeAstroನಿಮ್ಮ ಜಾಗದಲ್ಲಿ ಪಾತಳ ನಡಿಗೆ ಸಮಸ್ಯೆ ಇದ್ದರೆ ಮನೆ ಕಟ್ಟುವಾಗ ಮಾಡಿ ಈ ಪರಿಹಾರ

ನಿಮ್ಮ ಜಾಗದಲ್ಲಿ ಪಾತಳ ನಡಿಗೆ ಸಮಸ್ಯೆ ಇದ್ದರೆ ಮನೆ ಕಟ್ಟುವಾಗ ಮಾಡಿ ಈ ಪರಿಹಾರ

ಪ್ರತಿಯೊಬ್ಬರು ತಮ್ಮದೇ ಆದ ಮನೆಯನ್ನು ಹೊಂದಲು ಬಯಸುತ್ತಾರೆ. ಅದಕ್ಕಾಗಿ ಜಾಗವನ್ನು ಖರೀದಿಸುತ್ತಾರೆ. ಆದರೆ ಕೆಲವು ಜಾಗದಲ್ಲಿ ಪಾತಳ ನಡಿಗೆ ಇರುತ್ತದೆ. ಅಂದರೆ ಆ ಜಾಗ ನಾಗದೇವರಿಗೆ ಸಂಬಂಧಿಸಿದ್ದು ಆಗಿರುತ್ತದೆ. ಇಂತಹ ಜಾಗದಲ್ಲಿ ಮನೆ ನಿರ್ಮಿಸಿದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾಗಿ ಇಂತಹ ಸ್ಥಳದಲ್ಲಿ ಮನೆ ಕಟ್ಟುವ ಮುನ್ನ ಈ ಪರಿಹಾರ ಮಾಡಿ.

ವಾಸ್ತು ಶಾಸ್ತ್ರದ ಪ್ರಕಾರ, ನೀವು ಮನೆ ಕಟ್ಟಲು ಖರೀದಿಸಿದ ಸ್ಥಳದಲ್ಲಿ ಪಾತಾಳ ನಡಿಗೆ ಇದ್ದರೆ, ಅಲ್ಲಿ ಮನೆ ಕಟ್ಟಲು ಅಡಿಪಾಯ ಹಾಕುವಾಗ ಬೆಳ್ಳಿ ಅಥವಾ ಹಿತ್ತಾಳೆಯ ಜೋಡಿ ನಾಗರಹಾವಿನ ವಿಗ್ರಹವನ್ನು ಇಡಿ. ಇದರಿಂದ ಪಾತಾಳಲೋಕದ ಅಧಿಪತಿ ಶೇಷನಾಗನ ಅನುಗ್ರಹ ನಿಮ್ಮ ಮನೆಗೆ ಸಿಗುತ್ತದೆ. ಇದರಿಂದ ಯಾವುದೇ ಸಮಸ್ಯೆ ಕಾಡುವುದಿಲ್ಲವಂತೆ.

ಅಲ್ಲದೇ ಈ ವಿಗ್ರಹವನ್ನು ಮನೆಯ ಅಡಿಪಾಯದಲ್ಲಿ ಪ್ರತಿಷ್ಠಾಪನೆ ಮಾಡುವುದರಿಂದ ನಿಮಗೆ ಶಿವನ ಆಶೀರ್ವಾದ ದೊರೆಯುತ್ತದೆಯಂತೆ. ಇದರಿಂದ ಮನೆಯಲ್ಲಿ ಸುಖ, ಸಂತೋಷ ನೆಲೆಸಿರುತ್ತದೆಯಂತೆ. ಹಾಗೇ ಇದರಿಂದ ನಿಮಗಿರುವ ಸರ್ಪದೋಷ ಕೂಡ ನಿವಾರಣೆಯಾಗುತ್ತದೆಯಂತೆ. ಹಾಗೇ ಮನೆಯ ಮೇಲೆ ಯಾವುದೇ ದುಷ್ಟ ಶಕ್ತಿಗಳು ಪ್ರಭಾವ ಬೀರುವುದಿಲ್ಲವಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular