HomeKarnatakaಪ್ರೀತಿಸುವಂತೆ ತಂಗಿಯ ಹಿಂದೆ ಬಿದ್ದ ಯುವಕ; ಚಾಕು ಇರಿದ ಅಣ್ಣ

ಪ್ರೀತಿಸುವಂತೆ ತಂಗಿಯ ಹಿಂದೆ ಬಿದ್ದ ಯುವಕ; ಚಾಕು ಇರಿದ ಅಣ್ಣ

ಕಾರವಾರ: ಯುವಕನೊಬ್ಬ ಪ್ರೀತಿಸುವಂತೆ ಯುವತಿಯ ಹಿಂದೆ ಬಿದ್ದು, ಕಿರುಕುಳ ನೀಡುತ್ತಿದ್ದ. ಬುದ್ಧಿ ಮಾತಿಗೂ ಬಗ್ಗದ ಯುವಕನಿಗೆ ಯುವತಿಯ ಅಣ್ಣ ಚಾಕು ಇರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ನಡೆದಿದೆ.

ಹಳಿಯಾಳದ ಚವ್ಹಾಣ ಪ್ಲಾಟ್ ನಿವಾಸಿ ಮಹ್ಮದ್ ಜಬಿವುಲ್ಲಾ (24) ಚಾಕು ಇರಿತದಿಂದ ಗಾಯಗೊಂಡ ಯುವಕ. ತೇರಗಾಂವ್ ನ ಮಹ್ಮದ್ ಕೈಪ್ (20) ಚಾಕು ಇರಿದ ಆರೋಪಿ.

ಮಹ್ಮದ್ ಜಬಿವುಲ್ಲಾ ಎಂಬಾತ, ಮಹ್ಮದ್ ಕೈಪ್ ನ ಸಹೋದರಿ ಹಿಂದೆ ಬಿದ್ದಿದ್ದ. ಇದೇ ವಿಚಾರವಾಗಿ ಕಳೆದ ಆರು ತಿಂಗಳ ಹಿಂದೆಯೂ ಯುವಕರಿಬ್ಬರ ನಡುವೆ ಗಲಾಟೆಯಾಗಿತ್ತು. ಬಳಿಕ ಕುಟುಂಬದವರು ಸೇರಿ ರಾಜಿ ಮಾಡಿಸಿದ್ದರು. ಇಷ್ಟಾದರೂ ಮಹ್ಮದ್ ಜಬಿವುಲ್ಲಾ ತನ್ನ ಹಳೇ ಚಾಳಿ ಬಿಟ್ಟಿರಲಿಲ್ಲ. ಮಹ್ಮದ್ ಕೈಪ್ ತಂಗಿಯನ್ನು ಪ್ರೀತಿಸುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಮಹ್ಮದ್ ಕೈಪ್ ನಡುರಸ್ತೆಯಲ್ಲಿಯೇ ಮಹ್ಮದ್ ಜಬಿವುಲ್ಲಾಗೆ ಚಾಕು ಇರಿದು ಕೊಲೆ ಯತ್ನ ನಡೆಸಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರ್ನ ದಾಖಲಾಗಿದೆ.

 

For Latest News Updates, Join Our Whatsapp Community🚩
RELATED ARTICLES

Most Popular