ಮಂಗಳೂರು: ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ವ್ಯಕ್ತಿಯೊಬ್ಬರು 1.05 ಕೋಟಿ ರೂಪಾಯಿ ಕಳೆದುಕೊಂಡಿದ್ದಾರೆ.
ಅಪರಿಚಿತ ವ್ಯಕ್ತಿಯ ಸೂಚನೆಯಂತೆ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋದ ಪುತ್ತೂರು ನೆಲ್ಯಾಡಿ ಇಚ್ಲಂಪಾಡಿಯ ಕೆಡಂಬೈಲು ಪುಲಿಕ್ಕಲ್ ನಿವಾಸಿ ಸಿ.ಜಿ. ಸಜಿ(43) ಹಣ ಕಳೆದುಕೊಂಡವರು. ಮೇ 25ರಂದು ಟೆಲಿಗ್ರಾಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಯು.ಎಸ್.ಡಿ.ಟಿ. ಕ್ರಿಪ್ಟೋ ಕರೆನ್ಸಿಗೆ ಹಣ ವರ್ಗಾಯಿಸಲು ಡಿಫೈ ಆ್ಯಪ್ ಡೌನ್ಲೋಡ್ ಮಾಡುವಂತೆ ತಿಳಿಸಿದ್ದಾನೆ. ಅಂತೆಯೇ ಸಜಿ ಅವರು ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದಾರೆ. ಮಾತ್ರವಲ್ಲ, ಅಪರಿಚಿತ ವ್ಯಕ್ತಿ ನೀಡಿದ ಸೂಚನೆ ಪಾಲಿಸಿ ತಮ್ಮ ಬ್ಯಾಂಕ್ ಖಾತೆಗಳಿಂದ 1,05,79,711 ರೂಪಾಯಿ ವರ್ಗಾಯಿಸಿ ಕ್ರಿಪ್ಟೋ ಕರೆನ್ಸಿ ಟ್ರೇಡಿಂಗ್ ಮಾಡಲು ಹೋಗಿ ಅಷ್ಟು ಹಣ ಕಳೆದುಕೊಂಡಿದ್ದಾರೆ.