HomeKarnatakaಕನ್ನಡಿಗರ ಹೆಮ್ಮೆಯ 'ಮೈಸೂರ್ ಸ್ಯಾಂಡಲ್' ಉತ್ಪನ್ನಗಳ ಗುಣಗಾನ ಮಾಡಿದ ನಟಿ ಪೂಜಾ ಗಾಂಧಿ

ಕನ್ನಡಿಗರ ಹೆಮ್ಮೆಯ ‘ಮೈಸೂರ್ ಸ್ಯಾಂಡಲ್’ ಉತ್ಪನ್ನಗಳ ಗುಣಗಾನ ಮಾಡಿದ ನಟಿ ಪೂಜಾ ಗಾಂಧಿ

ಕರ್ನಾಟಕದ ಹೆಮ್ಮೆಯ ಉತ್ಪನ್ನವಾದ ‘ಮೈಸೂರು ಸ್ಯಾಂಡಲ್’ ರಾಜ್ಯ, ರಾಷ್ಟ್ರ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಜನಪ್ರಿಯತೆಯನ್ನು ಗಳಿಸಿದೆ. ಕನ್ನಡಿಗರ ಈ ಹೆಮ್ಮೆಯ ಉತ್ಪನ್ನವನ್ನು ನಟಿ ಪೂಜಾ ಗಾಂಧಿ ಹಾಡಿ ಹೊಗಳಿದ್ದಾರೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ನಟಿ ಪೂಜಾ ಗಾಂಧಿ, ಇತ್ತೀಚೆಗೆ ಪತ್ರಿಕೆ ಒಂದರಲ್ಲಿ ಮೈಸೂರ್ ಸ್ಯಾಂಡಲ್ ಸೋಪ್ ತನ್ನ ಉತ್ಪಾದನೆ ಮತ್ತು ಮಾರುಕಟ್ಟೆಯನ್ನು ದ್ವಿಗುಣಗೊಳಿಸಿರುವ ವರದಿ ಈ ನೆಲದ ಕೈಗಾರಿಕೆ ಮತ್ತು ಉತ್ಪನ್ನಗಳ ಶ್ರೇಷ್ಠತೆಗೆ ಸಾಕ್ಷಿ ಎಂದಿದ್ದಾರೆ.

ಆಗಾಗ್ಗೆ ಬೇರೆ ಸೋಪ್ ಗಳ ಮೋಹಕ್ಕೆ ಒಳಗಾದರೂ, ಮತ್ತೆ ಮತ್ತೆ ಕಾಡುವ ಪ್ರೀತಿಯಂತೆ ಮನೆ – ಮನ ಸೇರುವ, ಶತಮಾನದ ಇತಿಹಾಸ, ಅತ್ಯುತ್ತಮ ಸುಗಂಧ ಮತ್ತು ನಿರಂತರ ಗುಣಮಟ್ಟದ ಸ್ಥಿರತೆಯಿಂದಾಗಿ ಕನ್ನಡಿಗರೆಲ್ಲರ ಹೆಮ್ಮೆಯಾಗಿರುವ ಮೈಸೂರು ಸ್ಯಾಂಡಲ್ ಸೋಪ್ ನ ಬಗ್ಗೆ ತಮ್ಮ ಭಾವನೆ, ಅಭಿಪ್ರಾಯ ಮತ್ತು ನೆನಪುಗಳಿದ್ದರೆ ನನ್ನೊಂದಿಗೆ ಹಂಚಿಕೊಳ್ಳಿ ಎಂದು ಮೂಲಕ ಕನ್ನಡ ಅಕ್ಷರದಲ್ಲಿ ಬರೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
RELATED ARTICLES

Most Popular