alex Certify ಮಹಿಳೆಯರನ್ನು ಕಾಡುವ ಮುಟ್ಟಿನ ಸಮಸ್ಯೆಗಳಿಗೆ ಇಲ್ಲಿದೆ ನೈಸರ್ಗಿಕ ಪರಿಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರನ್ನು ಕಾಡುವ ಮುಟ್ಟಿನ ಸಮಸ್ಯೆಗಳಿಗೆ ಇಲ್ಲಿದೆ ನೈಸರ್ಗಿಕ ಪರಿಹಾರ

ಪ್ರತಿವರ್ಷ ಮೇ 28 ರಂದು ‘ಮುಟ್ಟಿನ ನೈರ್ಮಲ್ಯ ದಿನ’ವನ್ನು ಆಚರಿಸಲಾಗುತ್ತದೆ. ಇದರ ಉದ್ದೇಶ ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದರ ಕುರಿತು ಜನರಿಗೆ ಅರಿವು ಮೂಡಿಸುವುದು. ಮಹಿಳೆಯರ ಒಟ್ಟಾರೆ ಯೋಗಕ್ಷೇಮಕ್ಕೆ ಮುಟ್ಟಿನ ಆರೋಗ್ಯ ಬಹಳ ಮುಖ್ಯ. ಪ್ರಪಂಚದಾದ್ಯಂತ ಸುಮಾರು 1.8 ಶತಕೋಟಿ ಮಹಿಳೆಯರು ಋತುಚಕ್ರದ ಅನುಭವ ಹೊಂದಿದ್ದಾರೆ. ಇವರಲ್ಲಿ 80 ಪ್ರತಿಶತ ಮಹಿಳೆಯರು ಮುಟ್ಟಿನ ನೋವಿನಿಂದ ಪರದಾಡುತ್ತಾರೆ. ತೀವ್ರವಾದ ಸೆಳೆತ 30 ಪ್ರತಿಶತದಷ್ಟು ಮಹಿಳೆಯರನ್ನು ಕಾಡುತ್ತದೆ. ಅನಿಯಮಿತ ಋತುಚಕ್ರದಿಂದಾಗಿ 14 ರಿಂದ 25 ಪ್ರತಿಶತದಷ್ಟು ಮಹಿಳೆಯರು ತಮ್ಮ ಸಂತಾನೋತ್ಪತ್ತಿ ವಯಸ್ಸಿನಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಮುಟ್ಟಿನ ಸಮಯದಲ್ಲಿ ಸಮಸ್ಯೆಗಳಾಗುವುದೇಕೆ?

ಒತ್ತಡ, ಕೆಟ್ಟ ಆಹಾರ ಪದ್ಧತಿ, ವ್ಯಾಯಾಮದ ಕೊರತೆ ಮತ್ತು ಹಾರ್ಮೋನುಗಳ ಅಸಮತೋಲನ ಮುಟ್ಟಿನ ಸಮಸ್ಯೆಗೆ ಪ್ರಮುಖ ಕಾರಣ. ಇದರ ಜೊತೆಗೆ ಮುಟ್ಟಿನ ನೈರ್ಮಲ್ಯಕ್ಕೆ ಸಂಬಂಧಿಸಿದ ಉತ್ಪನ್ನಗಳ ಬಗೆಗಿನ ಮಾಹಿತಿ ಕೊರತೆಯೂ ಅನೇಕರಲ್ಲಿದೆ. ಹಾಗಾಗಿ ಮಹಿಳೆಯರು PMS, UTI, PCOS ಮತ್ತು PCOD ಯಂತಹ ವಿವಿಧ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಅವುಗಳಿಗೆ ಸರಿಯಾದ ಚಿಕಿತ್ಸೆ ಪಡೆಯುವುದಿಲ್ಲ.

ಮುಟ್ಟಿನ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ಆಯುರ್ವೇದದಲ್ಲಿ ಮುಟ್ಟಿನ ಸ್ವಾಸ್ಥ್ಯವನ್ನು ಒಟ್ಟಾರೆ ಆರೋಗ್ಯದ ಪ್ರಮುಖ ಭಾಗವೆಂದು ಪರಿಗಣಿಸಲಾಗಿದೆ. ಋತುಚಕ್ರವನ್ನು ನೈಸರ್ಗಿಕ ಶುದ್ಧೀಕರಣ ಪ್ರಕ್ರಿಯೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ದೇಹದಿಂದ ವಿಷ ಮತ್ತು ಕೊಳಕನ್ನು ತೆಗೆದುಹಾಕಲಾಗುತ್ತದೆ. ನೈಸರ್ಗಿಕವಾಗಿ ಮುಟ್ಟಿನ ಸೆಳೆತವನ್ನು ಕೂಡ ನಿರ್ವಹಿಸಬಹುದು.

ದೇಹವನ್ನು ಹೈಡ್ರೇಟ್‌ ಆಗಿಡಿ : ಗಿಡಮೂಲಿಕೆ ಚಹಾ ಮತ್ತು ಬೆಚ್ಚಗಿನ ನೀರನ್ನು ಮುಟ್ಟಿನ ಸಮಯದಲ್ಲಿ ಕುಡಿಯಬೇಕು. ದೇಹವನ್ನು ಹೈಡ್ರೇಟ್‌ ಆಗಿಡಬೇಕು. ಇದು ದೇಹದಿಂದ ವಿಷ ಮತ್ತು ತ್ಯಾಜ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕೆಫೀನ್, ಸೋಡಾ ಮತ್ತು ಮದ್ಯದಂತಹ ಉತ್ತೇಜಕ ಪಾನೀಯಗಳನ್ನು ಮುಟ್ಟಿನ ಸಮಯದಲ್ಲಿ ಸೇವನೆ ಮಾಡಬೇಡಿ. ಜೀರಿಗೆ ಕಷಾಯ ಅಥವಾ ಶುಂಠಿ ಕಷಾಯವನ್ನು ಕುಡಿಯುವುದರಿಂದ ಸೆಳೆತವನ್ನು ಕಡಿಮೆ ಮಾಡಬಹುದು.

ಸರಳ ಮತ್ತು ಪೌಷ್ಟಿಕ ಆಹಾರ ಸೇವಿಸಿ: ಸಂಸ್ಕರಿಸಿದ ಮತ್ತು ಕರಿದ ಆಹಾರ ಮುಟ್ಟಿನ ಸಮಯದಲ್ಲಿ ಹೆಚ್ಚು ಸೇವಿಸಬೇಡಿ. ಬಿಸಿಯಾದ ತಾಜಾ ಆಹಾರವನ್ನು ಸೇವಿಸುವುದು ಉತ್ತಮ. ತರಕಾರಿ, ಹಣ್ಣುಗಳನ್ನು ತಿನ್ನಬಹುದು. ಹೆಚ್ಚು ಮಸಾಲೆ ಪದಾರ್ಥಗಳು ಬೇಡ.

ವಿಶ್ರಾಂತಿ ತೆಗೆದುಕೊಳ್ಳಿ :  ಮುಟ್ಟಿನ ಸಮಯದಲ್ಲಿ ಮಹಿಳೆಯ ದೇಹವು ಗರ್ಭಾಶಯದ ಒಳಪದರವನ್ನು ಹೊರಹಾಕಲು ಹೆಚ್ಚು ಶ್ರಮಿಸುತ್ತದೆ. ಇದರಿಂದಾಗಿ ಆಯಾಸವಾಗುವುದು ಸಹಜ. ದೇಹಕ್ಕೆ ಚೇತರಿಕೆ ನೀಡಲು ಚೆನ್ನಾಗಿ ನಿದ್ದೆ ಮಾಡಿ. ಹಾಗಂತ ಇಡೀ ದಿನ ಹಾಸಿಗೆಯಲ್ಲಿ ಮಲಗಬಾರದು. ದೈಹಿಕ ಚಟುವಟಿಕೆಗಳನ್ನು ಮಾಡಬೇಕು. ಲಘುವಾದ ನಡಿಗೆ, ಯೋಗಾಸನ, ಸ್ಟ್ರೆಚಿಂಗ್‌ ಇವುಗಳಿಂದ ನೋವು ಸಹ ಕಡಿಮೆಯಾಗುತ್ತದೆ.

ಸ್ವಚ್ಛತೆ ಕಾಪಾಡಿಕೊಳ್ಳಿ : ಮುಟ್ಟಿನ ಸಮಯದಲ್ಲಿ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪ್ರತಿ 4-6 ಗಂಟೆಗಳಿಗೊಮ್ಮೆ ಪ್ಯಾಡ್ ಬದಲಾಯಿಸಬೇಕು. ಗುಪ್ತಾಂಗಗಳಿಗೆ ಕಿರಿಕಿರಿ ಉಂಟುಮಾಡಬಲ್ಲ ಪರಿಮಳಯುಕ್ತ ಉತ್ಪನ್ನಗಳನ್ನು ಬಳಸಬೇಡಿ. ಬಿಸಿ ಶವರ್ ತೆಗೆದುಕೊಳ್ಳುವುದು ಉತ್ತಮ. ಇದರಿಂದ ಸ್ನಾಯು ಸೆಳೆತ ಉಪಶಮನವಾಗುತ್ತದೆ.

ಆಯುರ್ವೇದ ಔಷಧ: ಕೆಲವು ಮಹಿಳೆಯರು ಋತುಚಕ್ರದ ಸಮಯದಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತಾರೆ.ಅಂಥವರು ಗಿಡಮೂಲಿಕೆಗಳನ್ನು ಒಳಗೊಂಡಿರುವ ಆಯುರ್ವೇದ ಔಷಧಿಗಳನ್ನು ಸೇವಿಸಬಹುದು. ಇದು ಮುಟ್ಟಿನ ನೋವು ಮತ್ತು ಅಸ್ವಸ್ಥತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...