HomeKarnatakaBREAKING NEWS: ಭೀಕರ ಸರಣಿ ಅಪಘಾತ; ಮೂವರ ಸ್ಥಿತಿ ಗಂಭೀರ

BREAKING NEWS: ಭೀಕರ ಸರಣಿ ಅಪಘಾತ; ಮೂವರ ಸ್ಥಿತಿ ಗಂಭೀರ

ಬೆಳಗಾವಿ: ಲಾರಿ, ಕಾರು ಹಾಗೂ 2 ಬೈಕ್ ಗಳ ನಡುವೆ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಮೂವರ ಸ್ಥಿತಿ ಗಂಭೀರವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆದಿದೆ.

ಚಿಕ್ಕೋಡಿ ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು, ವರುಣಾರ್ಭಟದ ನಡುವೆ ಮಹಾಲಿಂಗಪುರ ಹಾಗೂ ನಿಪ್ಪಾಣಿ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ನಿಯಂತ್ರ ತಪ್ಪಿ ಲಾರಿ-ಕಾರು ಹಾಗೂ 2 ಬೈಕ್ ಗಳು ಡಿಕ್ಕಿಯಾಗಿವೆ.

ಅಪಘಾತದಲ್ಲಿ ಓರ್ವ ಬೈಕ್ ಸವಾರ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular