HomeKarnatakaರಾಜ್ಯದಲ್ಲಿ ತಂಬಾಕು ಉತ್ಪನ್ನ ಮಾರಾಟದ ಆನ್ ಲೈನ್ ಅಪ್ಲಿಕೇಶನ್ ನಿಷೇಧ...? ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ...

ರಾಜ್ಯದಲ್ಲಿ ತಂಬಾಕು ಉತ್ಪನ್ನ ಮಾರಾಟದ ಆನ್ ಲೈನ್ ಅಪ್ಲಿಕೇಶನ್ ನಿಷೇಧ…? ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆಯಿಂದ ಪತ್ರ

ಬೆಂಗಳೂರು: ಅಪ್ರಾಪ್ತರು, ಯುವಕರು ತಂಬಾಕು ಉತ್ಪನ್ನಗಳಿಗೆ ದಾಸರಾಗುತ್ತಿರುವ ಹಿನ್ನೆಲೆಯಲ್ಲಿ ತಂಬಾಕು ಉತ್ಪನ್ನ ಮಾರಾಟದ ಆನ್ಲೈನ್ ಅಪ್ಲಿಕೇಶನ್ ಗಳಿಗೆ ನಿಷೇಧ ಹೇರಲು ಚಿಂತನೆ ನಡೆದಿದೆ.

ಆನ್ಲೈನ್ ಹೋಂ ಡೆಲಿವರಿ ಅಪ್ಲಿಕೇಶನ್ ಗಳ ವಿರುದ್ಧ ಕ್ರಮಕ್ಕಾಗಿ ಸೈಬರ್ ಕ್ರೈಂ ಇಲಾಖೆಗೆ ಆರೋಗ್ಯ ಇಲಾಖೆ ವತಿಯಿಂದ ಪತ್ರ ಬರೆಯಲಾಗಿದೆ. ಇ- ವಾಣಿಜ್ಯ ವೆಬ್ಸೈಟ್ ಗಳ ವಿರುದ್ಧ ಕಾನೂನು ಕ್ರಮಕ್ಕೆ ಕೋರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಲಿಂಕಿಟ್​​, ಝೊಮಾಟೋ, ಸ್ವಿಗ್ಗಿ, ಜೆಪ್ಟೋ, ಬಿಗ್​​ ಬ್ಯಾಸ್ಕೆಟ್​​​​​​​ ಸೇರಿ ಹಲವು ಹೋಮ್ ಡೆಲಿವರಿ ಆ್ಯಪ್​ ಗಳಿಂದ ಕೋಪ್ಟಾ ಕಾಂಯ್ದೆ -2003 ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಇದರಿಂದ ಅನೇಕ ದೂರುಗಳು ಕೂಡ ದಾಖಲಾದ ಹಿನ್ನೆಲೆ ಇ-ವಾಣಿಜ್ಯ ವೆಬ್​ಸೈಟ್​ ಮೇಲೆ ಕಾನೂನು ಕ್ರಮಕ್ಕೆ ಮನವಿ ಮಾಡಲಾಗಿದೆ.

ಹಲವು ಆಪ್ ಗಳು ಆರೋಗ್ಯದ ಎಚ್ಚರಿಕೆ ಸಂದೇಶಗಳಿಲ್ಲದೆ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿವೆ. ಅಪ್ರಾಪ್ತ ಮಕ್ಕಳು, ಯುವಕರಿಗೆ ವಿಷಕಾರಿ ಕ್ಯಾನ್ಸರ್ ಕಾರಕ ತಂಬಾಕು ಉತ್ಪನ್ನಗಳುನ್ನು ಸುಲಭವಾಗಿ ಸಿಗುತ್ತವೆ. ಇವುಗಳನ್ನು ಸೇವಿಸಲು ಉತ್ತೇಜಿಸಿದಂತಾಗುತ್ತದೆ. ಇಂತಹ ಕಾನೂನುಬಾಹಿರ ಆನ್ಲೈನ್ ವೆಬ್ಸೈಟ್ ಗಳ ಮೇಲೆ ತುರ್ತಾಗಿ ಕಾನೂನು ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆಯುಕ್ತ ರಂದೀಪ್ ಅವರು ಸೈಬರ್ ಕ್ರೈಮ್ ಇಲಾಖೆಗೆ ಪತ್ರ ಬರೆದಿದ್ದಾರೆ.

ಆನ್ಲೈನ್ ಅಪ್ಲಿಕೇಶನ್ ಗಳಲ್ಲಿ ತಂಬಾಕು ಉತ್ಪನ್ನಗಳು ಯುವಕರು, ಮಕ್ಕಳಿಗೆ ಸುಲಭವಾಗಿ ಸಿಗುತ್ತಿದ್ದು, ಇದಕ್ಕೆ ದಾಸರಾಗುತ್ತಿದ್ದಾರೆ. ಹೀಗಾಗಿ ಆನ್ಲೈನ್ ಹೋಂ ಡೆಲಿವರಿ ಆಪ್ ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಪತ್ರ ಬರೆದಿದ್ದು, ಇವುಗಳನ್ನು ನಿಷೇಧಿಸುವಂತೆ ಕೋರಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular