ವಿಜಯಪುರ: ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ಜಿಲ್ಲೆ ಇಂಡಿ ಪಟ್ಟಣದಲ್ಲಿ ನಡೆದಿದೆ.
ದೇಶಪಾಂಡೆ ತಾಂಡಾದಲ್ಲಿ ಮಕ್ಕಳಿಬ್ಬರು ಕೃಷಿ ಹೊಂಡದಲ್ಲಿ ಈಜಲು ಹೋಗಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ದುರಂತಕ್ಕೀಡಾಗಿ ಇಬ್ಬರೂ ಸಾವನ್ನಪ್ಪಿದ್ದಾರೆ.
12 ವರ್ಷದ ಅಮಿತ್ ರಾಠೋಡ್ ಹಾಗೂ 10 ವರ್ಷದ ಸುದೀಪ್ ರಾಠೋಡ್ ಮೃತ ಬಾಲಕು. ಇಂಡಿ ಶರಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಶಾಲೆಗಳಿಗೆ ಬೇಸಿಗೆ ರಜೆ ಹಿನ್ನೆಲೆಯಲ್ಲಿ ಮಕ್ಕಳು ಆಟವಾಡುತ್ತ ನದಿ, ಹಳ್ಳಗಳಿಗೆ ಈಜಲು ತೆರಳಿ ದುರಂತಕ್ಕೀಡಾಗುತ್ತಿರುವ ಸಾಲು ಸಾಲು ಘಟನೆಗಳು ಬೆಳಕಿಗೆ ಬರುತ್ತಿವೆ. ಪೋಷಕರು ಮಕ್ಕಳ ಚಲನವಲಗಳ ಮೇಲೆ ಗಮನಹರಿಸುವ ಅಗತ್ಯವಿದೆ.