HomeIndiaಖಾತೆಗೆ ಸಾವಿರಾರು ಕೋಟಿ ರೂ ಜಮಾ: ಹಣದ ಮೊತ್ತ ಕಂಡು ಬೆಚ್ಚಿಬಿದ್ದ ಗ್ರಾಹಕ

ಖಾತೆಗೆ ಸಾವಿರಾರು ಕೋಟಿ ರೂ ಜಮಾ: ಹಣದ ಮೊತ್ತ ಕಂಡು ಬೆಚ್ಚಿಬಿದ್ದ ಗ್ರಾಹಕ

ಲಖನೌ: ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಭಾನುಪ್ರಕಾಶ್ ಅವರ ಖಾತೆಗೆ 99,99,94,95,999.99 ರೂಪಾಯಿ ಜಮಾ ಆಗಿರುವುದಾಗಿ ಮೆಸೇಜ್ ಬಂದಿದ್ದು, ಇದನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದಾಗ ಸಾಫ್ಟ್‌ ವೇರ್ ದೋಷ ಎಂದು ಮಾಹಿತಿ ನೀಡಿದ್ದಾರೆ.

ಬರೋಡಾ ಬ್ಯಾಂಕ್ ನಲ್ಲಿ ಭಾನುಪ್ರಕಾಶ್ ಅವರ ಖಾತೆಯಲ್ಲಿ 99,99,94,95,999.99 ರೂ. ತೋರಿಸಿದೆ. ಆಕಸ್ಮಿಕವಾಗಿ ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಸಾಲದ ಖಾತೆಗೆ ಇಷ್ಟೊಂದು ಮೊತ್ತ ಜಮಾ ಆಗಿದೆ. ಅದನ್ನು ನೋಡಿದಾಗ ಅವರಿಗೆ ನಂಬಲಾಗಲಿಲ್ಲ. ಅವರು ಬ್ಯಾಂಕ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ರೋಹಿತ್ ಗೌತಮ್, ಸಾಫ್ಟ್‌ ವೇರ್ ದೋಷದಿಂದ ವ್ಯಕ್ತಿಯ ಖಾತೆಯಲ್ಲಿ ಭಾರಿ ಹಣದ ಮೊತ್ತ ಜಮಾ ಆಗಿದೆ. ಸಮಸ್ಯೆಯನ್ನು ಪರಿಹರಿಸಲು ತಕ್ಷಣದ ಕ್ರಮ ಕೈಗೊಂಡಿದ್ದೇವೆ. ಖಾತೆದಾರರಿಗೆ ಏನಾಯಿತು ಎಂದು ತಿಳಿಸಿದ್ದು, ತಪ್ಪನ್ನು ಸರಿಪಡಿಸುವವರೆಗೆ ಮತ್ತು ಯಾವುದೇ ಸಂಭಾವ್ಯ ದುರುಪಯೋಗವನ್ನು ತಪ್ಪಿಸಲು ಅವರ ಖಾತೆಯನ್ನು ಸ್ವಲ್ಪ ಸಮಯದವರೆಗೆ ತಡೆಹಿಡಿಯಲಾಗಿದೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular