HomeLatest News10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆ; ಕಾಂಗ್ರೆಸ್ ನಿಂದ ಮತ್ತೊಂದು ಮಹತ್ವದ ಘೋಷಣೆ

10 ಕೆಜಿ ಉಚಿತ ಆಹಾರ ಧಾನ್ಯ ವಿತರಣೆ; ಕಾಂಗ್ರೆಸ್ ನಿಂದ ಮತ್ತೊಂದು ಮಹತ್ವದ ಘೋಷಣೆ

ನವದೆಹಲಿ: ದೇಶದ ಬಡ ಕುಟುಂಬಗಳಿಗಾಗಿ ಕಾಂಗ್ರೆಸ್ ಮತ್ತೊಂದು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಮ್ಮ ಸರ್ಕಾರ ನಿಮಗೆ ಪ್ರತಿ ತಿಂಗಳು 5 ಅಲ್ಲ 10 ಕೆಜಿ ಉಚಿತ ರೇಷನ್ ನೀಡಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಿಸಿದ್ದಾರೆ.

ಯುಪಿಎ ಸರ್ಕಾರದ ಅವಧಿಯಲ್ಲಿ ‘ಆಹಾರ ಭದ್ರತಾ ಕಾಯ್ದೆ’ ಮೂಲಕ ಆಹಾರದ ಹಕ್ಕಿಗೆ ಕಾನೂನು ಸ್ಥಾನಮಾನ ನೀಡಿದ್ದೆವು, ’10 ಕೆಜಿ ಆಹಾರ ಧಾನ್ಯ ವಿತರಣೆ’ ಈ ನಿಟ್ಟಿನಲ್ಲಿ ಮುಂದಿನ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.

10 ಕೆಜಿ ಪಡಿತರ ಮತ್ತು ತಿಂಗಳಿಗೆ 8500 ರೂ. ಇವುಗಳಿಂದ ಶಿಕ್ಷಣ ಮತ್ತು ಸ್ವಯಂ ಉದ್ಯೋಗಕ್ಕೆ ಉತ್ತೇಜನ ಸಿಗಲಿದೆ ಮತ್ತು ಕೋಟ್ಯಾಂತರ ಕುಟುಂಬಗಳು ಬಡತನದಿಂದ ಹೊರಬಂದು ದೇಶದ ಆರ್ಥ ವ್ಯವಸ್ಥೆಗೆ ವೇಗ ನೀಡಲಿವೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಧಾನಿ ನರೇಂದ್ರ ಮೋದಿಯವರು 20-25 ಜನರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿ ‘ಅದಾನಿ’ಗಳ ಸರ್ಕಾರ ನಡೆಸಿದರು, ಆದರೆ ನಾವು ಕೋಟ್ಯಾಂತರ ಜನರನ್ನು ಲಕ್ಷಾಧಿಪತಿಗಳನ್ನಾಗಿ ಮಾಡಿ ‘ಭಾರತೀಯರ’ ಸರ್ಕಾರ ನಡೆಸುತ್ತೇವೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular