HomeIndiaದಾರುಣ ಘಟನೆ: ಗಂಟಲಲ್ಲಿ ಚಾಕಲೇಟ್ ಸಿಲುಕಿ 6 ವರ್ಷದ ಕಂದಮ್ಮ ಸಾವು

ದಾರುಣ ಘಟನೆ: ಗಂಟಲಲ್ಲಿ ಚಾಕಲೇಟ್ ಸಿಲುಕಿ 6 ವರ್ಷದ ಕಂದಮ್ಮ ಸಾವು

ಆರು ವರ್ಷದ ಮಗುವಿನ ಗಂಟಲಲ್ಲಿ ಚಾಕಲೇಚ್ ಸಿಲುಕಿ ಉಸಿರುಗಟ್ಟಿ ಸಾವನ್ನಪ್ಪಿರುವ ದಾರುಣ ಘಟನೆ ಉತ್ತರ ಪ್ರದೇಶದ ರಾಂಪುರದ ಶಹಾಬಾದ್ ಪ್ರದೇಶದಲ್ಲಿ ನಡೆದಿದೆ.

ಪುರಸಭಾ ಸದಸ್ಯರಾದ ಅಂಜುಮ್ ಅವರ ಪುತ್ರ ಹಂಜಾ ಗುರುವಾರ ಬೆಳಗ್ಗೆ ಮನೆಯಿಂದ ಹಣ ತೆಗೆದುಕೊಂಡು ಸ್ಥಳೀಯ ದಿನಸಿ ಅಂಗಡಿಯಲ್ಲಿ ಚಾಕಲೇಟ್ ಖರೀದಿಸಲು ತೆರಳಿದ್ದ.

ಮುಂದೆ ನಡೆಯಲಿರುವ ದುರಂತದ ಅರಿವಿಲ್ಲದೆ ಮಗು ಮುಗ್ಧವಾಗಿ ಎಂದಿನಂತೆ ಚಾಕಲೇಟ್ ತಿನ್ನಲು ಬಾಯಿಗೆ ಹಾಕಿಕೊಂಡಿದ್ದ. ಆದರೆ ಅವನು ಬಾಯಿಗೆ ಹಾಕಿಕೊಂಡಿದ್ದ ಚಾಕಲೇಟ್ ಗಂಟಲಿಗೆ ಸಿಲುಕಿಕೊಂಡಿತು. ಅವನ ಗಂಟಲಿನಲ್ಲಿ ಉಂಟಾಗಿದ್ದ ಕೀವು ಚಾಕಲೇಟ್ ಆತನ ಶ್ವಾಸನಾಳವನ್ನು ಪ್ರವೇಶಿಸುವಂತೆ ಮಾಡಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಂತರ ಬಾಲಕ ಉಸಿರಾಟದ ತೊಂದರೆಯಿಂದಾಗಿ ಪ್ರಜ್ಞಾಹೀನನಾದ. ಕುಟುಂಬಸ್ಥರು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಮಗು ಸಾವನ್ನಪ್ಪಿದೆ ಎಂದು ವೈದ್ಯರು ಘೋಷಿಸಿದರು. ಈ ಘಟನೆಯಿಂದ ಕುಟುಂಬಸ್ಥರು ದೊಡ್ಡ ಆಘಾತ ಹಾಗೂ ದುಃಖದಲ್ಲಿ ಮುಳುಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular