HomeKarnatakaಖಾಸಗಿ ವಿಡಿಯೋ ತೋರಿಸಿ ವೈದ್ಯನಿಂದ ಬ್ಲಾಕ್ ಮೇಲ್: ಹಣ ನೀಡದಿದ್ದಕ್ಕೆ ಪತಿಗೆ ಫೋಟೋ ಸೆಂಡ್

ಖಾಸಗಿ ವಿಡಿಯೋ ತೋರಿಸಿ ವೈದ್ಯನಿಂದ ಬ್ಲಾಕ್ ಮೇಲ್: ಹಣ ನೀಡದಿದ್ದಕ್ಕೆ ಪತಿಗೆ ಫೋಟೋ ಸೆಂಡ್

ರಾಮನಗರ: ಖಾಸಗಿ ಫೋಟೋ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ವೈದ್ಯನ ವಿರುದ್ಧ ಮಹಿಳೆ ಕುಂಬಳಗೂಡು ಪೊಲೀಸ್ ಠಾಣೆ ದೂರು ನೀಡಿದ್ದಾರೆ.

ಕೊಪ್ಪಳ ಮೂಲದ ಪರಸಪ್ಪ ಎಂಬುವನ ವಿರುದ್ಧ ದೂರು ದಾಖಲಾಗಿದೆ. ವಿನಾಯಕ ನಗರದಲ್ಲಿ ಮಹಿಳೆ ವಾಸವಾಗಿದ್ದ ಕಟ್ಟಡದಲ್ಲೇ ಕೆಳಮನೆಯನ್ನು ವೈದ್ಯ ಎಂದು ಹೇಳಿಕೊಂಡಿದ್ದ ಪರಸಪ್ಪನಿಗೆ ಬಾಡಿಗೆ ನೀಡಲಾಗಿತ್ತು. ಅದೇ ಬಡಾವಣೆಯಲ್ಲಿ ಪರಸಪ್ಪ ಕ್ಲಿನಿಕ್ ನಡೆಸುತ್ತಿದ್ದ. ಮಹಿಳೆಯ ಕೈಯಲ್ಲಿ ಗಂಟು ಆದಾಗ ಆತನಿಂದ ಚಿಕಿತ್ಸೆ ಪಡೆದಿದ್ದರು. ಬಳಿಕ ಇಬ್ಬರಲ್ಲಿಯೂ ಆತ್ಮೀಯತೆ ಬೆಳೆದಿದ್ದು ಆಗಿನಿಂದ ವೈದ್ಯ ಮನೆಗೆ ಬಂದು ಹೋಗುತ್ತಿದ್ದ. ಖಾಸಗಿ ಫೋಟೋ, ವಿಡಿಯೋಗಳನ್ನು ಮಹಿಳೆಯ ಅರಿವಿಗೆ ಬರದಂತೆ ತೆಗೆದುಕೊಂಡಿದ್ದ ಆರೋಪಿ ಅವುಗಳನ್ನು ಇಟ್ಟುಕೊಂಡು ತೇಜೋವಧೆ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾನೆ. ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ, ಚಿನ್ನಾಭರಣ ಪಡೆದಿದ್ದಾನೆ. ಹಣ ಕೊಡದಿದ್ದಾಗ ಖಾಸಗಿ ಫೋಟೋಗಳನ್ನು ಮಹಿಳೆಯ ಪತಿ ಮತ್ತು ಸಂಬಂಧಿಕರಿಗೆ ಕಳುಹಿಸಿದ್ದಾನೆ ಎನ್ನಲಾಗಿದ್ದು, ನೊಂದ ಮಹಿಳೆ ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular