ಕರ್ನಾಟಕದಲ್ಲಿ ಲೋಕಸಭಾ ಚುನಾವಣೆ ಎರಡು ಹಂತಗಳಲ್ಲಿ ನಡೆದಿದ್ದು, ಚುನಾವಣೆ ಬಳಿಕ ಸಚಿವರುಗಳಾದ ಡಾ. ಜಿ ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೊಳಿ ಗೌಪ್ಯ ಸಭೆ ನಡೆಸಿದ್ದಾರೆ. ಹೀಗಾಗಿ ಇತ್ತೀಚೆಗೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂದೆ, ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ ಎಂದು ಹೇಳಿರುವುದು ಮತ್ತೆ ಮುನ್ನಲೆಗೆ ಬಂದಿದೆ.
ಹೀಗಾಗಿ ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ ಪಕ್ಷದ ಹಿರಿಯ ದಲಿತ ನಾಯಕರಾದ ಸಚಿವ ಡಾ. ಜಿ. ಪರಮೇಶ್ವರ್ ಹಾಗೂ ಸತೀಶ್ ಜಾರಕಿಹೋಳಿ ಗೌಪ್ಯ ಸಭೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಆಗಬಹುದಾದ ತಲೆದಂಡದ ಮುನ್ಸೂಚನೆ ಅರಿತೇ ಸಭೆ ನಡೆಸಿದ್ದಾರೆ. ಚುನಾವಣೆಯಲ್ಲಿನ ಹಿನ್ನಡೆಯನ್ನು ಸಿದ್ದರಾಮಯ್ಯ ಅವರ ತಲೆಗೆ ಕಟ್ಟಿ ಅವರನ್ನು ಮೂಲೆಗೆ ತಳ್ಳುವುದಕ್ಕೆ ಸಿದ್ಧತೆ ನಡೆದಿದೆಯಾ?
ಕಳೆದ ವರ್ಷದಿಂದ ಅನುದಾನ ನೀಡದಿರುವುದರಿಂದ ಕಾಂಗ್ರೆಸ್ ನಾಯಕತ್ವದ ವಿರುದ್ಧದ ಅಸಮಾಧಾನ ಹಾಗೂ ಕೆಟ್ಟ ಫಲಿತಾಂಶದ ಮುನ್ಸೂಚನೆಯಿಂದ ಒಂದುಗೂಡಿದ ಹಲವು ಶಾಸಕರ ಒಗ್ಗಟ್ಟಿನ ಧ್ವನಿಯ ಪ್ರತಿರೂಪವೇ ಪ್ರತ್ಯೇಕ ಸಭೆ.!
ಲೋಕಸಭೆ ಚುನಾವಣೆ ನಂತರ ಅಲ್ಲೋಲ ಕಲ್ಲೋಲ ಗ್ಯಾರಂಟಿ ಎಂದು ಹೇಳಿದೆ.
https://twitter.com/BJP4Karnataka/status/1790622666300518811