HomeKarnatakaಸಾಫ್ಟ್ ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿ ಮದುವೆಯಾದ ಭೂಪ; ಮಗುವಾಗುತ್ತಿದ್ದಂತೆ ಪತ್ನಿ-ಮಗು ಬಿಟ್ಟು ಪರಾರಿಯಾದ...

ಸಾಫ್ಟ್ ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿ ಮದುವೆಯಾದ ಭೂಪ; ಮಗುವಾಗುತ್ತಿದ್ದಂತೆ ಪತ್ನಿ-ಮಗು ಬಿಟ್ಟು ಪರಾರಿಯಾದ ಕಿರಾತಕ

ಹುಬ್ಬಳ್ಳಿ: ಸಾಫ್ಟ್ ವೇರ್ ಇಂಜಿನಿಯರ್ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ ಪತಿಮಹಾಶಯನೊಬ್ಬ ಪತ್ನಿಯ ಜೊತೆ ಚೆನ್ನಾಗಿಯೇ ಜವನ ಸಾಗಿಸುತ್ತಿದ್ದವನು ಈಗ ಮಗುವಾಗುತ್ತಿದ್ದಂತೆ ಪತ್ನಿ-ಮಗುವನ್ನು ಬಿಟ್ಟು ನಾಪತ್ತೆಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಮೊಹಮ್ಮದ್ ಗೌಸ್ ಪರಾರಿಯಾದ ಪತಿ. ಪತಿಗಾಗಿ ರುಕ್ಸಾನಾ ಮಗುವಿನ ಜೊತೆ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಮೊಹಮ್ಮದ್ ಗೌಸ್ ಗೆ ಅದಾಗಲೇ ಮದುವೆಯಾಗಿ ಪತ್ನಿಯಿದ್ದರೂ ಸುಳ್ಳು ಹೇಳಿದ್ದ. ಅಲ್ಲದೇ ತಾನು ಸಾಫ್ಟ್ ವೇರ್ ಉದ್ಯೋಗಿ. ಹುಬ್ಬಳ್ಳಿಯಲ್ಲಿ ಆಸ್ತಿಯಿದೆ, ಒಂದು ಪಿಜಿ ನಡೆಸುತ್ತಿದ್ದೇನೆ ಎಂದು ಹೇಳಿ ಯಲ್ಲಾಪುರ ಮೂಲದ ರುಕ್ಸಾನಾಳನ್ನು ವಿವಾಹವಾಗಿದ್ದ.

ಆರಂಭದಲ್ಲಿ ಚನ್ನಾಗಿಯೇ ಇದ್ದ ಮೊಹಮ್ಮದ್ ಈಗ ರುಕ್ಸಾನಾಳಿಗೆ ಮಗುವಾಗುತ್ತಿದ್ದಂತೆ ಬಾಣಂತಿ-ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ. ಕಂಗಾಲಾಗಿರುವ ರುಕ್ಸಾನಾ ನ್ಯಾಯಕ್ಕಾಗಿ ಮೊಹಮ್ಮದ್ ಗೌಸ್ ಮನೆ ಮುಂದೆ ಧರಣಿ ನಡೆಸುತ್ತಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರುಕ್ಸಾನಾ ಕುಟುಬದವರು ಹುಬ್ಬಳ್ಳಿಯ ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿ ಮೊಹಮ್ಮದ್ ಗೌಸ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular