HomeEntertainmentಇಂದು ಗೌರಿ ಚಿತ್ರದಿಂದ ಬರಲಿದೆ ಮೊದಲ ಗೀತೆ

ಇಂದು ಗೌರಿ ಚಿತ್ರದಿಂದ ಬರಲಿದೆ ಮೊದಲ ಗೀತೆ

ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ನಾಯಕ ನಟನಾಗಿ ಅಭಿನಯಿಸಿರುವ ಬಹು ನಿರೀಕ್ಷಿತ ಗೌರಿ ಚಿತ್ರದ ಟೈಮ್ ಬರುತ್ತೆ ಎಂಬ ಮೊದಲ ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ ಈ ಸಿನಿಮಾ ಟೀಸರ್ ಈಗಾಗಲೇ ನೋಡುಗರ ಗಮನ ಸೆಳೆದಿದ್ದು, ಇನ್ನೇನು ಶೀಘ್ರದಲ್ಲೇ  ತೆರೆ ಮೇಲೆ ಬರಲು ಸಜ್ಜಾಗಿದೆ.

ಇಂದ್ರಜಿತ್ ಲಂಕೇಶ್ ಅವರೇ  ಈ ಚಿತ್ರವನ್ನು ನಿರ್ದೇಶಿಸಿದ್ದು,  ಸಮರ್ಜಿತ್ ಲಂಕೇಶ್ ಅವರಿಗೆ ಜೋಡಿಯಾಗಿ ಸಾನ್ಯ ಅಯ್ಯರ್ ಅಭಿನಯಿಸಿದ್ದಾರೆ. ಮಾನಸಿ ಸುಧೀರ್, ಸಂಪತ್ ಮೈತ್ರಿಯ, ಮತ್ತು ರಾಜೀವ್ ಪಿಲ್ಲೆ ಉಳಿದ ಪಾತ್ರ ವರ್ಗದಲ್ಲಿದ್ದಾರೆ ಲಾಫಿಂಗ್ ಬುದ್ಧ ಫಿಲಂಸ್ ಬ್ಯಾನರ್ ನಲ್ಲಿ ಇಂದ್ರಜಿತ್ ಲಂಕೇಶ್ ನಿರ್ಮಾಣ ಮಾಡಿದ್ದು, ಚಂದನ್ ಶೆಟ್ಟಿ, ಶಿವು ಬಿರ್ಗಿ ಮತ್ತು ಅನಿರುದ್ಧ ಶಾಸ್ತ್ರಿ ಸಂಗೀತ ಸಂಯೋಜನೆ ನೀಡಿದ್ದಾರೆ. ಕೆಎಂ ಪ್ರಕಾಶ್ ಸಂಕಲನ, ರವಿವರ್ಮ ಮತ್ತು ಟೈಗರ್ ಡ್ಯಾನಿ ಸಾಹಸ ನಿರ್ದೇಶನ, ಮಧು, ರಾಜಶೇಖರ್ ಕೆ ಎಲ್ ಮತ್ತು ಮಾಸ್ತಿ ಸಂಭಾಷಣೆ ಬರೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular