ಅನೇಕರಿಗೆ ಬೆಳಗ್ಗೆ ಎದ್ದ ತಕ್ಷಣ ಮುಖ ಊದಿಕೊಂಡಿರುತ್ತದೆ. ಇದಕ್ಕೆ ಹಲವು ಕಾರಣಗಳಿರಬಹುದು. ದೀರ್ಘಕಾಲದವರೆಗೆ ಮೊಬೈಲ್ ಫೋನ್ ಬಳಸುವುದರಿಂದ ಮತ್ತು ಟಿವಿ ನೋಡುವುದರಿಂದಲೂ ಈ ರೀತಿ ಆಗುತ್ತದೆ. ಮುಖದ ಊತವನ್ನು ಕಡಿಮೆ ಮಾಡಲು ಕೆಲವೊಂದು ಮನೆಮದ್ದುಗಳನ್ನು ಮಾಡಬಹುದು.
ಉಪ್ಪು ಸೇವನೆ ಕಡಿಮೆ ಮಾಡಿ
ಕೆಲವೊಮ್ಮೆ ನಿದ್ರೆಯ ಕೊರತೆಯಿಂದಾಗಿ ಮುಖದಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಮುಖ ಊದಿಕೊಂಡಂತಾದರೆ ನಮ್ಮ ಸಂಪೂರ್ಣ ಲುಕ್ ಹಾಳಾಗುತ್ತದೆ. ಹಾಗಾಗಿ ರಾತ್ರಿ ಹೆಚ್ಚು ಸಿಹಿತಿಂಡಿಗಳನ್ನು ತಿನ್ನಬೇಡಿ. ಸಿಹಿ ತಿಂದರೆ ಮುಖ ಊದಿಕೊಂಡಂತಾಗುತ್ತದೆ. ಅಷ್ಟೇ ಅಲ್ಲ ಉಪ್ಪನ್ನು ಕಡಿಮೆ ಸೇವಿಸುವುದರಿಂದಲೂ ಊತವನ್ನು ಕಡಿಮೆ ಮಾಡಬಹುದು.
ಫೈಬರ್ ಭರಿತ ಆಹಾರ
ಮುಖದ ಊತ ಕಡಿಮೆ ಮಾಡಲು ಆರೋಗ್ಯಕರ ಆಹಾರ ಸೇವನೆ ಮಾಡಬೇಕು. ಆಹಾರದಲ್ಲಿ ಫೈಬರ್ ಅಂಶವಿರುವ ಪದಾರ್ಥಗಳನ್ನು ಸೇವಿಸಿ. ಬೆಳಗ್ಗೆ ಪಪ್ಪಾಯ ತಿನ್ನುವುದು ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳು ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.
ಮುಖದ ಮಸಾಜ್
ಮುಖ ಊದಿಕೊಂಡಿದೆ ಎನಿಸಿದಾಗ ಮಾಯಿಶ್ಚರೈಸರ್ ಅಥವಾ ಎಣ್ಣೆಯಿಂದ ಮುಖಕ್ಕೆ ಸರಿಯಾಗಿ ಮಸಾಜ್ ಮಾಡಬೇಕು. ಮುಖದ ಊತವನ್ನು ಕಡಿಮೆ ಮಾಡಲು ಇದು ಅತ್ಯುತ್ತಮ ಮಾರ್ಗವಾಗಿದೆ. ಇದರಿಂದ ಮುಖಕ್ಕೆ ಹೆಚ್ಚಿನ ಹೊಳಪು ಕೂಡ ಬರುತ್ತದೆ.
ಹಾರ್ಮೋನುಗಳ ಬದಲಾವಣೆ
ದೇಹದಲ್ಲಿನ ಹಾರ್ಮೋನುಗಳ ಬದಲಾವಣೆಯಿಂದಲೂ ಮುಖದ ಮೇಲೆ ಊತ ಕಾಣಿಸಿಕೊಳ್ಳುತ್ತದೆ. ಋತುಚಕ್ರದ ಸಮಯದಲ್ಲಿ ಪ್ರೊಜೆಸ್ಟರಾನ್ ಹಾರ್ಮೋನ್ ದೇಹದಲ್ಲಿ ಹೆಚ್ಚಾಗುತ್ತದೆ, ಇದರಿಂದಾಗಿ ಮುಖದ ಮೇಲೆ ಬಹಳಷ್ಟು ಬದಲಾವಣೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಬೆಳಗ್ಗೆ ಎದ್ದ ತಕ್ಷಣ ಮುಖ ಊದಿಕೊಂಡಂತೆ ಕಾಣುತ್ತದೆ.
ಐಸ್ ಮಸಾಜ್
ಮುಖಕ್ಕೆ ಐಸ್ನಿಂದ ಮಸಾಜ್ ಮಾಡಬಹುದು. ಐಸ್ ಮಸಾಜ್ ಮಾಡುವುದರಿಂದ ಚರ್ಮದ ಊತ ಕಡಿಮೆಯಾಗುತ್ತದೆ. ಸುಟ್ಟ ಚರ್ಮವನ್ನು ಸ್ವಚ್ಛಗೊಳಿಸಲು ಕೂಡ ಇದು ಸಹಕಾರಿ.