HomeIndiaಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ಬೆಂಬಲ ವಾಪಸ್ ಪಡೆದ 3 ಪಕ್ಷೇತರ ಶಾಸಕರು: ಬಿಕ್ಕಟ್ಟಿನಲ್ಲಿ...

ಲೋಕಸಭೆ ಚುನಾವಣೆ ಹೊತ್ತಲ್ಲೇ ಬಿಜೆಪಿಗೆ ಶಾಕ್: ಬೆಂಬಲ ವಾಪಸ್ ಪಡೆದ 3 ಪಕ್ಷೇತರ ಶಾಸಕರು: ಬಿಕ್ಕಟ್ಟಿನಲ್ಲಿ ಹರಿಯಾಣ ಬಿಜೆಪಿ ಸರ್ಕಾರ

ಚಂಡೀಗಢ: ಹರಿಯಾಣದಲ್ಲಿ ಬಿಜೆಪಿ ಸರ್ಕಾರಕ್ಕೆ ಬಿಕ್ಕಟ್ಟು ಉಂಟಾಗಿದೆ. ಬಿಜೆಪಿ ಸರ್ಕಾರವನ್ನು ಬೆಂಬಲಿಸುತ್ತಿದ್ದ ಮೂವರು ಸ್ವತಂತ್ರ ಶಾಸಕರು ಬೆಂಬಲ ಹಿಂಪಡೆದಿದ್ದಾರೆ. ಇದರಿಂದಾಗಿ ನಯಾಬ್ ಸಿಂಗ್ ಸೈನಿ ನೇತೃತ್ವದ ಸರ್ಕಾರಕ್ಕೆ ಹಿನ್ನಡೆಯಾಗಿದೆ.

ನಿರ್ಗಮಿಸಿದ್ದಾರೆ. ಅವರ ನಿರ್ಗಮನದೊಂದಿಗೆ ಹರಿಯಾಣದ ನಯಾಬ್ ಸರ್ಕಾರವು ಅಲ್ಪ ಮತಕ್ಕೆ ಕುಸಿದಿದೆ.

ಮೂವರು ಶಾಸಕರು ಈಗ ಕಾಂಗ್ರೆಸ್ ಬೆಂಬಲ ಘೋಷಿಸಿದ್ದಾರೆ. ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್‌ನ ಮಾಜಿ ಮುಖ್ಯಮಂತ್ರಿ ಭೂಪೇಂದ್ರ ಹೂಡಾ ಅವರ ಸಮ್ಮುಖದಲ್ಲಿ, ಪುಂಡ್ರಿ ಕ್ಷೇತ್ರದ ಸ್ವತಂತ್ರ ಶಾಸಕ ರಣಧೀರ್ ಗೋಲನ್, ನಿಲೋಖೇರಿಯ ಶಾಸಕ ಧರಂಪಾಲ್ ಗೊಂಡರ್ ಮತ್ತು ಚಾರ್ಖಿ ದಾದ್ರಿ ಶಾಸಕ ಸೋಮ್ವಿರ್ ಸಾಂಗ್ವಾನ್ ಅವರು ರೋಹ್ಟಕ್‌ನಲ್ಲಿ ಬಿಜೆಪಿ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರದ ನೀತಿಗಳಿಂದ ನಮಗೆ ಸಂತೋಷವಿಲ್ಲ ಹೀಗಾಗಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಮೂವರು ಸ್ವತಂತ್ರ ಶಾಸಕರು ಹೇಳಿದ್ದಾರೆ.

ಸ್ವತಂತ್ರ ಶಾಸಕರು ಬಿಜೆಪಿಗೆ ನೀಡಿದ ಬೆಂಬಲ ಹಿಂತೆಗೆದುಕೊಂಡ ನಂತರ ಹರಿಯಾಣದಲ್ಲಿ ಬಹುಮತ ಕುಸಿದಿದೆ. 90 ಸ್ಥಾನಗಳ ಹರಿಯಾಣ ವಿಧಾನಸಭೆಯಲ್ಲಿ ಬಹುಮತದ ಸಂಖ್ಯೆ 45. ಬಿಜೆಪಿ 41 ಶಾಸಕರನ್ನು ಹೊಂದಿದ್ದರೆ, 6 ಸ್ವತಂತ್ರ ಶಾಸಕರ ಬೆಂಬಲವೂ ಇದೆ. ಈ ಪೈಕಿ ಮೂವರು ಈಗ ತಮ್ಮ ಬೆಂಬಲವನ್ನು ಹಿಂಪಡೆದಿದ್ದಾರೆ. ಈ ರೀತಿ ನೋಡಿದರೆ, ಹರಿಯಾಣದ ಸೈನಿ ಸರ್ಕಾರದಲ್ಲಿ ಪ್ರಸ್ತುತ 44 ಶಾಸಕರು ಮಾತ್ರ ಉಳಿದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular