BIG NEWS: ಪೂಂಚ್ ದಾಳಿಕೋರರ ರೇಖಾಚಿತ್ರ ಬಿಡುಗಡೆ; ಭಯೋತ್ಪಾದಕರ ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ

ಜಮ್ಮು ಮತ್ತು ಕಾಶ್ಮೀರದ ಭದ್ರತಾ ಪಡೆಗಳು ಇತ್ತೀಚೆಗೆ ಪೂಂಚ್‌ನಲ್ಲಿ ಭಾರತೀಯ ವಾಯುಪಡೆಯ (ಐಎಎಫ್) ವಾಹನದ ಮೇಲೆ ದಾಳಿ ಮಾಡಿದ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರ ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಅವರ ಬಂಧನದ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿವೆ.

ಪೂಂಚ್‌ನ ಶಾಸಿತಾರ್ ಬಳಿ ನಡೆದ ದಾಳಿಯಲ್ಲಿ ಐಎಎಫ್ ಅಧಿಕಾರಿ ವಿಕ್ಕಿ ಪಹಾಡೆ ಸಾವನ್ನಪ್ಪಿದ್ದರೆ ಇತರ ನಾಲ್ವರು ಸಿಬ್ಬಂದಿ ಗಾಯಗೊಂಡಿದ್ದರು. ಘಟನೆಯ ನಂತರ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಪ್ರಮುಖ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ. ಭಯೋತ್ಪಾದಕರನ್ನು ಪತ್ತೆಹಚ್ಚಲು ಶಸ್ತ್ರಸಜ್ಜಿತ ಬುಲೆಟ್ ಪ್ರೂಫ್ ವಾಹನಗಳು ಮತ್ತು ಶ್ವಾನ ದಳಗಳನ್ನು ಬಳಸಿಕೊಳ್ಳಲಾಗಿದೆ.

ಕಾರ್ಯಾಚರಣೆಯ ಮೇಲ್ವಿಚಾರಣೆಗಾಗಿ 16 ಕಾರ್ಪ್ಸ್ ನ ಕಾರ್ಪ್ಸ್ ಕಮಾಂಡರ್ ಮತ್ತು ಜಮ್ಮು ವಲಯದ ಎಡಿಜಿ ಆನಂದ್ ಜೈನ್ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಹಲವು ಶಂಕಿತರನ್ನು ವಿಚಾರಣೆಗೆ ವಶಕ್ಕೆ ಪಡೆಯಲಾಗಿದೆ ಎಂದು ಜಮ್ಮುವಿನ ಎಡಿಜಿಪಿ ಆನಂದ್ ಜೈನ್ ತಿಳಿಸಿದ್ದಾರೆ.

ಮಧ್ಯಪ್ರದೇಶದ ಛಿಂದ್ವಾರದ ನೋನಿಯಾ ಕರ್ಬಲ್ ಪ್ರದೇಶದ ನಿವಾಸಿ ವಿಕ್ಕಿ ಪಹಾಡೆ, ತನ್ನ ಸಹೋದರಿಯ ಮದುವೆಯಲ್ಲಿ ಭಾಗವಹಿಸಿದ ನಂತರ ಘಟನೆ ನಡೆದ 15 ದಿನಗಳ ಮೊದಲು ಕೆಲಸಕ್ಕೆ ವಾಪಾಸ್ ಆಗಿದ್ದರು. ಅವರು 2011 ರಲ್ಲಿ IAF ಗೆ ಸೇರಿದಾಗಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ವಿಕ್ಕಿ ಪಹಾಡೆ ಅವರು ಪತ್ನಿ ರೀನಾ ಮತ್ತು ಮಗ ಹಾರ್ದಿಕ್ ಅವರನ್ನು ಅಗಲಿದ್ದಾರೆ.

https://twitter.com/DDNewslive/status/1787405283758596353?ref_src=twsrc%5Etfw%7Ctwcamp%5Etweetembed%7Ctwterm%5E1787405283758596353%7Ctwgr%5E7860c7c2e36b6821568bdb08051e310297de7a2e%7Ctwcon%5Es1_&ref_url=https%3A%2F%2Fwww.oneindia.com%2Findia%2Fpoonch-attack-sketches-released-of-attackers-rs-20-lakh-reward-announced-3817579.html

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read