HomeIndiaಅರ್ಧ ಶತಮಾನದಿಂದ ಪ್ರೀತಿ, ವಿಶ್ವಾಸದ ಅವಿನಾಭಾವ ಸಂಬಂಧವಿದೆ: ರಾಯ್ ಬರೇಲಿ ಜನತೆಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ...

ಅರ್ಧ ಶತಮಾನದಿಂದ ಪ್ರೀತಿ, ವಿಶ್ವಾಸದ ಅವಿನಾಭಾವ ಸಂಬಂಧವಿದೆ: ರಾಯ್ ಬರೇಲಿ ಜನತೆಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ

ನವದೆಹಲಿ: ರಾಯ್ ಬರೇಲಿಯಿಂದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಹಿನ್ನಲೆಯಲ್ಲಿ ರಾಯ್ ಬರೇಲಿ ಜನರಿಗೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ಕಳಿಸಿದ್ದಾರೆ.

ಕೆಲವು ದಿನಗಳ ಹಿಂದೆ ನನ್ನ ತಾಯಿ ಸೋನಿಯಾ ಗಾಂಧಿ ನನ್ನ ಕುಟುಂಬ ದೆಹಲಿಯಲ್ಲಿ ಅಪೂರ್ಣವಾಗಿದೆ ಎಂದು ಹೇಳಿದ್ದರು. ದಶಕಗಳ ಕಾಲ ಸುಖ, ದುಃಖ, ಬಿಕ್ಕಟ್ಟು, ಹೋರಾಟದಲ್ಲಿ ರಾಯ್ ಬರೇಲಿ ಜನ ಜೊತೆಯಾಗಿದ್ದಾರೆ. ರಾಯ್ ಬರೇಲಿ ಜನತೆಯೊಂದಿಗೆ ಪ್ರೀತಿ ಮತ್ತು ವಿಶ್ವಾಸದ ಸಂಬಂಧವಿದೆ. ಇದು ಸೇವೆ ಮತ್ತು ನಂಬಿಕೆಯ ಸಂಬಂಧವೂ ಆಗಿದೆ ಎಂದು ತಿಳಿಸಿದ್ದಾರೆ.

ರಾಯ್ ಬರೇಲಿಯ ಸಂಬಂಧ ಅರ್ಥ ಶತಮಾನದಿಂದ ಅವಿನಾಭಾವವಾಗಿದೆ. ಇಲ್ಲಿ ನಾವು ಪಡೆದ ಪ್ರೀತಿ, ಆತ್ಮೀಯತೆ ಗೌರವಕ್ಕೆ ಬೆಲೆ ಕಟ್ಟಲಾಗದು. ನಿಮ್ಮ ಪ್ರೀತಿಯ ಋಣ ಎಂದಿಗೂ ತೀರಿಸಲಾಗುವುದಿಲ್ಲ, ಬೆಲೆ ಕಟ್ಟಲಾಗುವುದಿಲ್ಲ.  ಸಂಕಷ್ಟದ ಸಮಯದಲ್ಲಿ, ಸಂವಿಧಾನ, ಪ್ರಜಾಪ್ರಭುತ್ವ ಉಳಿವಿಗೆ ನಮ್ಮ ಇಡೀ ಕುಟುಂಬದ ಹೋರಾಟದಲ್ಲಿ ನಮ್ಮೊಂದಿಗೆ ದೃಢವಾಗಿ ರಾಯ್ ಬರೇಲಿ ನಿಂತಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾವಿರಾರು ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಣ್ಣ ನಾಮಪತ್ರ ಸಲ್ಲಿಸಿದ್ದಾರೆ. ಈ ಕ್ಷೇತ್ರದಲ್ಲಿ ರಾಹುಲ್ ಗಾಂಧಿಯವರಿಗೆ ಆಶೀರ್ವದಿಸುವಂತೆ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಪತ್ರ ಬರೆದಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular