ಬೆಂಗಳೂರು: ರಾಜ್ಯದಲ್ಲಿಯೂ ಪತಂಜಲಿ ಉತ್ಪನ್ನಗಳು ಬ್ಯಾನ್ ಆಗುವ ಸಾಧ್ಯತೆ ಇದೆ. ಉತ್ತರಾಖಂಡ್ ನಲ್ಲಿ 14 ಪತಂಜಲಿ ಉತ್ಪನ್ನಗಳನ್ನು ಬ್ಯಾನ್ ಮಾಡಿದ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಫುಲ್ ಅಲರ್ಟ್ ಆಗಿದೆ.
ಪತಂಜಲಿ ಉತ್ಪನ್ನಗಳನ್ನು ಪರೀಕ್ಷೆ ಮಾಡುವಂತೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.
ಸುಪ್ರೀಂ ಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಉತ್ತರಾಖಂಡ ಸರ್ಕಾರ ಪತಂಜಲಿ ಆಯುರ್ವೇದ ಸಂಸ್ಥೆಯ ಉತ್ಪನ್ನಗಳ ಮೇಲೆ ಗದಾ ಪ್ರಹಾರ ನಡೆಸಿದ್ದು, ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆ ಉತ್ಪಾದಿಸುವ 14 ಆಯುರ್ವೇದ ಉತ್ಪನ್ನಗಳಿಗೆ ನೀಡಲಾಗಿದ್ದ ಮಾರಾಟ ಪರವಾನಿಗೆಯನ್ನು ರದ್ದು ಮಾಡಿದೆ. ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ಕೂಡ ಕ್ರಮ ಕೈಗೊಂಡಿದ್ದು, ಪರಿಶೀಲನೆಗೆ ಸಚಿವರು ಆದೇಶಿಸಿದ್ದಾರೆ.
2
ಸುಳ್ಳು ಜಾಹೀರಾತು ನೀಡಿ ಜನರಿಗೆ ವಂಚಿಸಿದ್ದ #BabaRamdev ಹಾಗೂ ಆಚಾರ್ಯ ಬಾಲಕೃಷ್ಣ ಒಡೆತನದ #Patanjali ಸಂಸ್ಥೆಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದೆ.ಸರ್ವೋಚ್ಚ ನ್ಯಾಯಾಲಯವೇ ಪತಂಜಲಿ ಸಂಸ್ಥೆಯ ವಿಶ್ವಾಸರ್ಹತೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾಗ ವಿಪಕ್ಷ ನಾಯಕ @RAshokaBJP ಪತಂಜಲಿ ಜನ ಮೆಚ್ಚಿದ ಬ್ರ್ಯಾಂಡ್ ಎಂದು ಸರ್ಟಿಫಿಕೇಟ್… https://t.co/SU1RBpZhSJ
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 30, 2024
1
ಉತ್ತರಕಾಂಡದ BJP ಸರ್ಕಾರ #Patanjali 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದೆ.ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ನಾನು ಆದೇಶಿಸಿದ್ದೆ.
ಆಗ ತನ್ನ ಮನೆಗೇ ಬೆಂಕಿ ಬಿದ್ದಂತೆ ಚಡಪಡಿಸಿದ್ದ ವಿಪಕ್ಷ ನಾಯಕ @RAshokaBJP ಪತಂಜಲಿ ಸಂಸ್ಥೆ ಮೇಲೆ ದ್ವೇಷ ಯಾಕೆ ಎಂದು ನನ್ನನ್ನು… https://t.co/vsqXbJqpZo
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) April 30, 2024

